'ದಮ್ಮು, ತಾಕತ್ ಇದ್ರೆ ಬನ್ನಿ'; ಅಭಿಮಾನಿಗಳ ಮುಂದೆಯೇ ನಟ ಕಿಚ್ಚ ಸುದೀಪ್ ವಿರುದ್ಧ ಉಗ್ರಪ್ಪ ರೋಷಾವೇಶ!

ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರುವುದಿಲ್ಲವೋ ಅಂತಹ ಸಮಾಜ ಉದ್ಧಾರ ಆಗುವುದಿಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನು ಕೋರ್ಟ್ ಇಳಿಕೆ ಮಾಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು ಎಂದರು.
Kichcha Sudeep - VS Ugrappa
ಕಿಚ್ಚ ಸುದೀಪ್ - ವಿಎಸ್ ಉಗ್ರಪ್ಪ
Updated on: 

ಚಿತ್ರದುರ್ಗ: ಮದಕರಿ ನಾಯಕರ ಜಯಂತ್ಯುತ್ಸವo ಅಂಗವಾಗಿ ಮಂಗಳವಾರ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವೈಭವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಿಎಸ್ ಉಗ್ರಪ್ಪ ನಟ ಕಿಚ್ಚ ಸುದೀಪ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮ ಉದ್ದೆಶಿಸಿ ಮಾತನಾಡಿದ ಅವರು, ಅಭಿಮಾನಿಗಳ ಮುಂದೆ, ನಾಯಕ ಸಮುದಾಯದ ಮಗನಾಗಿದ್ದರೆ ನಮ್ಮ ಸಮುದಾಯದ ಪರ ಧ್ವನಿ ಎತ್ತಿ. ಮೀಸಲಾತಿ ಹೋರಾಟಕ್ಕೆ ಕೈಜೋಡಿಸಿ, ಬೀದಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳಿ. ದಮ್ಮು, ತಾಕತ್ ಇದ್ರೆ ನಮ್ಮ ಸಮುದಾಯದ ಮೀಸಲಾತಿ ಪರ ಹೋರಾಟಕ್ಕೆ ಬನ್ನಿ ಎಂದು ಸವಾಲೆಸೆದಿದ್ದಾರೆ.

ನಾಯಕ ಜನಾಂಗದ ಮನೆಯ ಮಗನಾಗಿದ್ದರೆ, ನಮ್ಮ ಜನರ ಮೀಸಲಾತಿಗಾಗಿ ಹೋರಾಡಿ. ಅಭಿಮಾನಿಗಳಿಂದ ಕೇಕೆ, ಶಿಳ್ಳೆ ಪಡೆಯೋದಲ್ಲ, ಜನಾಂಗದ ಪರ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ಉಗ್ರಪ್ಪ ಒತ್ತಾಯಿಸಿದ್ದಾರೆ.

ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರುವುದಿಲ್ಲವೋ ಅಂತಹ ಸಮಾಜ ಉದ್ಧಾರ ಆಗುವುದಿಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನು ಕೋರ್ಟ್ ಇಳಿಕೆ ಮಾಡಿದೆ. ಧಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಇಳಿಯಲಿ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು. ಮತ್ತೆ ಮೀಸಲಾತಿ ಪ್ರಮಾಣವನ್ನು ಶೇ 56ಕ್ಕೆ ಏರಿಸಬೇಕು ಎಂದಿದ್ದಾರೆ.

ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿ ಹೆಚ್ಚಿಸಬೇಕು. ಚಿತ್ರದುರ್ಗದ ಬಸ್ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಮದಕರಿ ನಾಯಕರ ಹೆಸರು ಇಡಬೇಕು. ಡಿಸಿ ಕಚೇರಿಗೆ ಮದಕರಿ ನಾಯಕರ ಹೆಸರು ಇಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

Kichcha Sudeep - VS Ugrappa
SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ರಾಜ್ಯ ಸರ್ಕಾರ ಮದಕರಿ ನಾಯಕರ ಹೆಸರಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಚಿತ್ರದುರ್ಗದಲ್ಲಿ ಮದಕರಿ ನಾಯಕರ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ನೀವೆಲ್ಲ ಕಿಚ್ಚ ಕಿಚ್ಚ ಅಂತಾ ಕೂಗುತ್ತಿದ್ದಿರಿ. ಶೇ 56 ರಷ್ಟು ಮೀಸಲಾತಿ ಹೆಚ್ಚಳ ಹೋರಾಟಕ್ಕೆ ನಾಯಕರಾಗಿ ಎಂದು ನಟ ಸುದೀಪ್‌ಗೆ ನನ್ನ ಮನವಿ. ನನ್ನ ಕೊನೆಯ ಉಸಿರಿರುವವರೆಗೂ SC, ST, OBCಗಳ ಸೇವೆ ಮಾಡುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com