ಸಸ್ಪೆನ್ಸ್ ಥ್ರಿಲ್ಲರ್ 'ಜುಗಲ್ಬಂದಿ' ಯಲ್ಲಿ ಅರ್ಚನಾ ಕೊಟ್ಟಿಗೆ!

ದಿವಾಕರ್ ಡಿಮ್ ಡಿಮಾ ನಿರ್ದೇಶನ ಸಸ್ಪೆನ್ಸ್, ಥ್ರಿಲ್ಲರ್ ಜುಗಲ್ಪಂದಿ ಸಿನಿಮಾದಲ್ಲಿ ಬಹು ತಾರಾಗಣವಿದೆ.ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮತ್ತು ಮಾನಸಿ ಸುಧೀರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಜುಗಲ್ಬಂದಿ ಪೋಸ್ಟರ್

ದಿವಾಕರ್ ಈ ಹಿಂದೆ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಎಂಬ ಸಿನಿಮಾ ಘಷಿಸಿದ್ದರು, ಆದರೆ ಕಾರಣಾಂತರಗಲಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ನಿರ್ದೇಶಕರು ಜುಗಲ್ಬಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನವೆಂಬರ್ 12 ರಂದು ಬಿಡುಗಡೆಯಾಗಲಿದೆ.

ಚಿತ್ರದ ಶೂಟಿಂಗ್ ನವೆಂಬರ್ 22 ರಂದು ಪ್ರಾರಂಭವಾಗಲಿದೆ. ಮೊದಲ ಶೆಡ್ಯೂಲ್ ಅನ್ನು ಬೆಂಗಳೂರು ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತದೆ.

ದಿವಾಕರ್ ಅವರೇ ಡಿಮ್ ಡಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜುಗಲ್ಬಂದಿಯ ಸಂಗೀತದ ಹಕ್ಕುಗಳನ್ನು ಈಗಾಗಲೇ ಎ2 ಮ್ಯೂಸಿಕ್ ಗೆ ಮಾರಾಟ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com