ವಿದೇಶ

11 ದಿನಗಳ ಬಳಿಕ ಮತ್ತೆ NVIDIA ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ: ಷೇರುಪೇಟೆಯಲ್ಲಿ ಸಂಚಲನ!

ವಿಶ್ವದ ಪ್ರಮುಖ ಚಿಪ್ ತಯಾರಕರಾದ NVIDIAದ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರು ಕಂಪನಿಗೆ ಮರಳಿದ್ದಾರೆ. ಕಂಪನಿಯ ಮಂಡಳಿಯು ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO), ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮತ್ತೆ ನೇಮಕ ಮಾಡಿದೆ.

11 ದಿನಗಳ ಬಳಿಕ ಮತ್ತೆ NVIDIA ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ: ಷೇರುಪೇಟೆಯಲ್ಲಿ ಸಂಚಲನ!
ಜೆನ್ಸನ್ ಹುವಾಂಗ್
Published On :

ವಿಶ್ವದ ಪ್ರಮುಖ ಚಿಪ್ ತಯಾರಕರಾದ NVIDIAದ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರು ಕಂಪನಿಗೆ ಮರಳಿದ್ದಾರೆ. ಕಂಪನಿಯ ಮಂಡಳಿಯು ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO), ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮತ್ತೆ ನೇಮಕ ಮಾಡಿದೆ. NVIDIA ಸೋಮವಾರ ಅಧಿಕೃತ ಘೋಷಣೆ ಮಾಡಿದೆ.

ಈ ನಿರ್ಧಾರಕ್ಕೆ ಮುನ್ನ, ಜೆನ್ಸನ್ ಹುವಾಂಗ್ ಅವರೊಂದಿಗೆ ಹಲವಾರು ಸುತ್ತಿನ ಚರ್ಚೆಗಳು ಮತ್ತು ಸಭೆಗಳನ್ನು ನಡೆಸಲಾಗಿದೆ ಎಂದು ಕಂಪನಿಯ ಮಂಡಳಿ ತಿಳಿಸಿದೆ. ಇದರ ನಂತರ ಮಂಡಳಿಯು ಅವರ ಪ್ರಾಮಾಣಿಕ ಪ್ರತಿಕ್ರಿಯೆಗಳು ಮತ್ತು ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿತು. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಿರಿಯ US ಸರ್ಕಾರಿ ಅಧಿಕಾರಿಗಳಿಂದ ಇನ್‌ಪುಟ್ ಪಡೆದಿರುವುದಾಗಿ ಮಂಡಳಿಯು ಹೇಳಿದೆ. ಮಂಡಳಿಯ ಪ್ರಕಾರ, ಹುವಾಂಗ್ ಅವರ ಮರಳುವಿಕೆ ರಾಷ್ಟ್ರೀಯ ಭದ್ರತಾ ಬೆದರಿಕೆಯನ್ನುಂಟುಮಾಡುವುದಿಲ್ಲ ಎಂದು ಅದು ವಿಶ್ವಾಸ ಹೊಂದಿದೆ.

ಮಂಡಳಿಯ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್, ಜೆನ್ಸನ್ NVIDIA ಯನ್ನು ಮುನ್ನಡೆಸಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಮಂಡಳಿಯು ನಂಬುತ್ತದೆ. ಅವರ ಮರಳುವಿಕೆ ನಮ್ಮ ಷೇರುದಾರರು, ಉದ್ಯೋಗಿಗಳು, ಪಾಲುದಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಒಳ್ಳೆಯದ್ದು, ನಮಗೆ ಜೆನ್ಸನ್ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಮತ್ತು ಅವರು ಕಂಪನಿಯ ಅಧಿಕಾರ ವಹಿಸಿಕೊಂಡಾಗ ಅವರೊಂದಿಗೆ ಮತ್ತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.

ಜೆನ್ಸನ್ ಹುವಾಂಗ್ ಅವರ ಮರಳುವಿಕೆಯನ್ನು NVIDIA ಮಂಡಳಿಯ ಹಿಂದಿನ ನಿರ್ಧಾರಕ್ಕಿಂತ ಪ್ರಮುಖ ಬದಲಾವಣೆ ಎಂದು ಪರಿಗಣಿಸಲಾಗುತ್ತಿದೆ. ಕಳೆದ ವಾರವಷ್ಟೇ, ಹೊಸ ಮಂಡಳಿಯ ಅಧ್ಯಕ್ಷ ಹಾರ್ವೆ ಜೋನ್ಸ್ ಕಂಪನಿಯ ಗಳಿಕೆಯ ಸಭೆಯಲ್ಲಿ ಮಂಡಳಿಯು ಹುವಾಂಗ್ ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಅವರನ್ನು ಮತ್ತೆ CEO ಆಗಿ ನೇಮಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದರು.

ನವೆಂಬರ್ 12ರಂದು ಹುವಾಂಗ್ ಸಿಇಒ, ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ನಿರ್ಗಮನದ ನಂತರ, ಕಂಪನಿಯ CFO ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ CEO ಆಗಿ ನೇಮಿಸಲಾಯಿತು. ಈಗ, ಮಂಡಳಿಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಹುವಾಂಗ್ ಅವರನ್ನು CEO ಆಗಿ ಮರುಸ್ಥಾಪಿಸಿದೆ. ಇದರೊಂದಿಗೆ, NVIDIA ನಲ್ಲಿ ನಾಯಕತ್ವದ ಬಗ್ಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅನಿಶ್ಚಿತತೆ ಕೊನೆಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.