ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

ಎರಡನೇ ಉದ್ಯೋಗಿಯ ಹೆಸರನ್ನು ರಾಯಿಟರ್ಸ್ ಬಹಿರಂಗಪಡಿಸಿಲ್ಲ. ಆ ಮಹಿಳೆಯನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ.
Jensen Huang.
ಜೆನ್ಸನ್ ಹುವಾಂಗ್‌
Updated on: 

ಸ್ಯಾನ್ ಫ್ರಾನ್ಸಿಸ್ಕೊ: ಎನ್‌ವಿಡಿಯಾ ಸಿಇಒ ಸ್ಥಾನದಿಂದ ಕೆಳಗಿಳಿಸಲ್ಪಟ್ಟ ಜೆನ್ಸನ್ ಹುವಾಂಗ್ ಅವರು ಕಂಪನಿಯ ಮತ್ತೊಬ್ಬ ಉದ್ಯೋಗಿಯೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದರು ಎಂದು ಈ ವಿಷಯದ ಬಗ್ಗೆ ತಿಳಿದಿರುವ ಇಬ್ಬರು ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ರಾಯಿಟರ್ಸ್ ಸುದ್ದಿಸಂಸ್ಥೆ ಬಹಿರಂಗಪಡಿಸಿದೆ.

ಅವರ ರಾಜೀನಾಮೆಗೆ ಕಾರಣವಾದ ವಿವಾಹೇತರ ಸಂಬಂಧಗಳ ಕುರಿತು ಬಂದಿರುವ ವರದಿಗಳ ಬೆನ್ನಲ್ಲೇ ಈ ಹೊಸ ವಿಚಾರ ಬೆಳಕಿಗೆ ಬಂದಿದೆ. ನಿನ್ನೆ ಗುರುವಾರ ಅವರು ರಾಜೀನಾಮೆ ನೀಡಿದ್ದು, ಈ ಹಿಂದೆ ವರದಿಯಾಗಿದ್ದ ಇಬ್ಬರು ಮಹಿಳೆಯರೊಂದಿಗಿನ ಸಂಬಂಧಗಳು ಇದಕ್ಕೆ ಕಾರಣವಾಗಿವೆ.

ಆ ಇಬ್ಬರು ಮಹಿಳೆಯರೆಂದರೆ, ಚೀನಾದ ಗೂಢಚಾರಿಕೆ ನಡೆಸುತ್ತಿರುವ ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಶಂಕೆ ಇರುವ ಆಲಿಸ್ ಹುವಾಂಗ್ ಮತ್ತು ಎನ್‌ವಿಡಿಯಾದ ಆರೋಗ್ಯ ಸೇವಾ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್.

ಎರಡನೇ ಉದ್ಯೋಗಿಯ ಹೆಸರನ್ನು ರಾಯಿಟರ್ಸ್ ಬಹಿರಂಗಪಡಿಸಿಲ್ಲ. ಆ ಮಹಿಳೆಯನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ.

Jensen Huang.
Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!

ಈ ಕುರಿತು ಪ್ರತಿಕ್ರಿಯಿಸಲು ಎನ್‌ವಿಡಿಯಾ ನಿರಾಕರಿಸಿದೆ. ಕಿಂಬರ್ಲಿ ಪೊವೆಲ್, ಜೆನ್ಸನ್ ಹುವಾಂಗ್ ಹಾಗೂ ಎನ್‌ವಿಡಿಯಾ ಆಡಳಿತ ಮಂಡಳಿಯ ಪ್ರತಿನಿಧಿಯೂ ಪ್ರತಿಕ್ರಿಯೆ ನೀಡುವಂತೆ ಕೋರಿದ ಮನವಿಗಳಿಗೆ ಉತ್ತರಿಸಿಲ್ಲ. ಆಲಿಸ್ ಹುವಾಂಗ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧದ ಕುರಿತು ವರದಿಗಳು ಪ್ರಕಟವಾದ ಬೆನ್ನಲ್ಲೇ, ನವೆಂಬರ್ 8ರಂದು ನೀಡಿದ ಹೇಳಿಕೆಯಲ್ಲಿ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧವೊಂದನ್ನು ಹೊಂದಿದ್ದುದಾಗಿ ಒಪ್ಪಿಕೊಂಡಿದ್ದರು. ಆದರೆ, ಆ ಹೇಳಿಕೆಯಲ್ಲಿ ಅವರು ಆಲಿಸ್ ಹುವಾಂಗ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.

Jensen Huang.
ಬೇಹುಗಾರಿಕೆ, ವಿವಾಹೇತರ ಸಂಬಂಧದ ಆರೋಪ; Nvidia CEO Jensen Huang ರಾಜಿನಾಮೆ; ಹೊಸ ಸಿಇಒ ಯಾರು?

ಎನ್‌ವಿಡಿಯಾದ ಮಾಜಿ ಸಿಇಒ ಕಂಪನಿಗೆ ರಾಜೀನಾಮೆ ನೀಡಿರುವ ನಿರ್ಧಾರವು ಅವರು ರೂಪಿಸಲು ನೆರವಾದ ಕೃತಕ ಬುದ್ಧಿಮತ್ತೆ (AI) ಉದ್ಯಮದಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಬಹುದು. ಕಂಪನಿಯ ಚಿಪ್‌ಗಳ ಖರೀದಿಯನ್ನು ಸುಲಭಗೊಳಿಸುವ ಸಂಕೀರ್ಣ ಹಣಕಾಸು ವ್ಯವಸ್ಥೆಗಳ ಮೂಲಕ ಎನ್‌ವಿಡಿಯಾ ತನ್ನ ಆರ್ಥಿಕ ಬಲವನ್ನು ಬಳಸಿಕೊಂಡು ಎಐ ಉದ್ಯಮದ ಬೆಳವಣಿಗೆಗೆ ನೆರವಾಗಿದೆ. ಈ ಉದ್ದೇಶಕ್ಕಾಗಿ ಕ್ಲೌಡ್ ಕಂಪ್ಯೂಟಿಂಗ್ ಕಂಪನಿಗಳು ಹಾಗೂ ಎಐ ಸಂಶೋಧನಾ ಸಂಸ್ಥೆಗಳಿಗೂ ಆರ್ಥಿಕ ಬೆಂಬಲ ನೀಡಿದೆ.

63 ವರ್ಷದ, ವಿವಾಹಿತರಾದ ಜೆನ್ಸನ್ ಹುವಾಂಗ್ ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧ ಕುರಿತು ವರದಿಗಳು ಪ್ರಕಟವಾದ ಬಳಿಕ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿತ್ತು.

Jensen Huang.
ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಜೆನ್ಸನ್ ಹುವಾಂಗ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಕಂಪನಿ ಹುಡುಕಾಟ ಆರಂಭಿಸಿದೆ. ಈ ಹುದ್ದೆಗೆ ಆಂತರಿಕ ಹಾಗೂ ಬಾಹ್ಯ ಅಭ್ಯರ್ಥಿಗಳನ್ನು ಪರಿಗಣಿಸುತ್ತಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ, ಜೆನ್ಸನ್ ಹುವಾಂಗ್ ಅವರನ್ನು ವಿದೇಶಿ ಗುಪ್ತಚರ ಸಂಸ್ಥೆಯೊಂದು ಗುರಿಯಾಗಿಸಿಕೊಂಡಿತ್ತೇ ಎಂಬ ಬಗ್ಗೆ ತನಿಖೆ ನಡೆಸಲು ಎನ್‌ವಿಡಿಯಾ ಆಡಳಿತ ಮಂಡಳಿ ಸ್ವತಂತ್ರ ನಿರ್ದೇಶಕರ ನೇತೃತ್ವದಲ್ಲಿ ಹಾಗೂ ಹೊರಗಿನ ಕಾನೂನು ಸಲಹೆಗಾರರ ನೆರವಿನೊಂದಿಗೆ ಪರಿಶೀಲನೆ ಆರಂಭಿಸಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯು ಹುವಾಂಗ್ ಅವರ ಮೇಲಿನ ವಿಶ್ವಾಸವನ್ನೂ ವ್ಯಕ್ತಪಡಿಸಿತ್ತು.

ನಿನ್ನೆ ಎನ್‌ವಿಡಿಯಾ ಕಂಪೆನಿಯ ಷೇರುಗಳು ಶೇ.5.5ರಷ್ಟು ಕುಸಿದವು. ಅಕ್ಟೋಬರ್ ಆರಂಭದಲ್ಲಿ ದಾಖಲಿಸಿದ್ದ ಗರಿಷ್ಠ ಮಟ್ಟದಿಂದ ಕಂಪನಿಯ ಷೇರು ಮೌಲ್ಯವು ಶೇ.30ಕ್ಕೂ ಹೆಚ್ಚು ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X