The New Indian Express
ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ನಿಶ್ಚಿತ್ ಕೊರೊಡಿ ಗಂಟುಮೂಟೆ ಸಿನಿಮಾ ಮೂಲಕ ಛಾಪು ಮೂಡಿಸಿದವರು. ಅವರು ಹೊಸದಾಗಿ ನಟಿಸಿದ ಟಾಮ್ ಅಂಡ್ ಜೆರ್ರಿ ಸಿನಿಮಾ ಇದೇ ನವೆಂಬರ್ 12ರಂದು ತೆರೆಕಾಣುತ್ತಿದೆ. ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಈ ಸಿನಿಮಾಗಾಗಿ ತಾವು ಹಲವು ರೂಪಾಂತರಗಳಿಗೆ ಒಡ್ಡಿಕೊಂಡಿದ್ದರು.
ಇದನ್ನೂ ಓದಿ: 'ಟಾಮ್ ಅಂಡ್ ಜೆರ್ರಿ' ನಾಯಕಿ ಪಾತ್ರ ನಿಜಜೀವನದಲ್ಲಿ ನನ್ನನ್ನು ಹೋಲುತ್ತದೆ: ಚೈತ್ರಾ ರಾವ್
ಮೊದಲ ಪುಟ ಸ್ಕ್ರಿಪ್ಟ್ ಓದಿ ಮುಗಿಸುವಾಗಲೇ ನನ್ನ ಪಾತ್ರದ ತೂಕ ಎಷ್ಟಿದೆ ಎನ್ನುವುದು ನನಗೆ ಅರಿವಾಗಿತ್ತು. ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸಿಕೊಳ್ಳಬೇಕಿತ್ತು. ಅದಕ್ಕಾಗಿ ನನ್ನನ್ನು ನಾನು ಬದಲಾಯಿಸಿಕೊಂಡೆ. ಗಂಟುಮೂಟೆ ಸಿನಿಮಾ ನಂತರ ಕೇವಲ ಒಂದೇ ಪ್ರಕಾರದ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿಬಿಡುವ ಅಪಾಯ ಅವರಿಗೆ ಎದುರಾಗಿತ್ತು. ಅದನ್ನು ಮೀರುವ ಪ್ರಯತ್ನದಲ್ಲಿದ್ದಾಗಲೇ ಟಾಮ್ ಅಂಡ್ ಜೆರ್ರಿ ಸಿನಿಮಾ ಅವರನ್ನು ಅರಸಿ ಬಂಡಿದ್ದು.
ಇದನ್ನೂ ಓದಿ: ಕಸ್ತೂರ್ಬಾ ಪಾತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡ ನಟಿ ಹರಿಪ್ರಿಯಾ: ಬರಗೂರು ರಾಮಚಂದ್ರಪ್ಪ ಜೊತೆ ಕೆಲಸ ಮಾಡಿದ ಸಂತಸ
ಕನ್ನಡ ಚಿತ್ರರಂಗದಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿರುವ ವಿನಯ್ ಸ್ಪಷ್ಟ ಗುರಿಗಳನ್ನು ಹೊಂದಿದ್ದಾರೆ. ಒಬ್ಬ ಕಲಾವಿದ ನೀರಿನಂತೆ ಇರಬೇಕು ಎನ್ನುವುದು ಅವರ ಫಿಲಾಸಫಿ. ಎಂಥಹುದೇ ಪಾತ್ರವಾದರೂ ಕಲಾವಿದ ಅದಕ್ಕೆ ಹೊಂದಿಕೊಳ್ಳಬೇಕು ಎನ್ನುವುದು ಅವರ ಪಾಲಿಸಿ.
ಇದನ್ನೂ ಓದಿ: ದೇಶ ವಿದೇಶದ ಅಂತಾರಾಷ್ತ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಸದ್ದು