ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಬಿಟ್ಟು ಹೋಗಿದ್ದೀಯಾ, ಅದನ್ನು ಮುಂದುವರಿಸುವ ಶಕ್ತಿಯನ್ನು ನೀಡು: 'ಅಪ್ಪು' ನೆನೆದು ರಾಘಣ್ಣ ಭಾವುಕ ನುಡಿ
ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಅಪ್ಪು ಹಠಾತ್ ಕಣ್ಮರೆಯಾಗಿ ಅವರ ಕುಟುಂಬಸ್ಥರನ್ನು, ಬಂಧುಗಳು-ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನಗಳಾಗಿದ್ದು, ಅವರ ಕುಟುಂಬಸ್ಥರು ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
Published: 09th November 2021 11:25 AM | Last Updated: 09th November 2021 01:17 PM | A+A A-

ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿರುವ ಫೋಟೋ
ಬೆಂಗಳೂರು: ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಅಪ್ಪು ಹಠಾತ್ ಕಣ್ಮರೆಯಾಗಿ ಅವರ ಕುಟುಂಬಸ್ಥರನ್ನು, ಬಂಧುಗಳು-ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನಗಳಾಗಿದ್ದು, ಅವರ ಕುಟುಂಬಸ್ಥರು ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಕಳೆದ ಕೆಲವು ದಿನಗಳಿಂದ ತಮ್ಮನ ಬಗ್ಗೆ ಮನದಾಳದ ಮಾತುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹೊರಹಾಕುತ್ತಿದ್ದಾರೆ. ಹಳೆಯ ನೆನಪುಗಳ ಫೋಟೋಗಳನ್ನು ಇಂದು ಹಂಚಿಕೊಂಡಿರುವ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪು ಜೊತೆಗಿನ ಕೊನೆ ಸೆಲ್ಫೀ ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್!
ನಿರುದ್ಯೋಗಿಯಾಗಿದ್ದ ನನಗೆ ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಕೊಟ್ಟುಬಿಟ್ಟು ಹೋಗಿದ್ದೀಯಾ ಮಗನೇ, ಸೇವೆ ಮಾಡುವಾಗ ಯಾರಿಗೂ ಹೇಳದೆ ಕಿವುಡ, ಮೂಗನಂತೆ, ಕುರುಡನಂತೆ ಸಮಾಜ ಸೇವೆ ಮಾಡುತ್ತಿದ್ದೆ, ನಿನ್ನ ಈ ಉದಾತ್ತ ಕೆಲಸವನ್ನು ಮುನ್ನಡೆಸಿಕೊಂಡು ಹೋಗಲು ನನಗೆ ಶಕ್ತಿ ನೀಡು, ನಿನ್ನ ಶಾಶ್ವತ ನೆನಪುಗಳೊಂದಿಗೆ ಬದುಕುವ ಪ್ರೀತಿಯ ಶಕ್ತಿಯನ್ನು ನೀಡು ಎಂದು ರಾಘಣ್ಣ ಕೇಳಿಕೊಂಡಿದ್ದಾರೆ.