ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 5 ದಿನಗಳು ಕಳೆದಿದ್ದು, ಕುಟುಂಬ ಸದಸ್ಯನನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ದೊಡ್ಮನೆಯಲ್ಲಿ ನೀರವ ಮೌನ ಆವರಿಸಿದೆ. ಈ ನಡುವಲ್ಲೇ ರಾಘವೇಂದ್ರ ರಾಜ್ ಕುಮಾರ್ ಅವರು ಅಪ್ಪು ಜೊತೆಗಿನ ಅಪರೂಪದ ನೆನಪೊಂದನ್ನು ಹಂಚಿಕೊಂಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಜೊತೆಗೆ ತೆಗೆದುಕೊಂಡ ಕೊನೆಯ ಸೆಲ್ಫೀ ಫೋಟೋವನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ ಕೆಲ ಭಾವುಕ ನುಡಿಗಳನ್ನೂ ಕೂಡ ರಾಘವೇಂದ್ರ ರಾಜ್ ಕುಮಾರ್ ಅವರು ಬರೆದುಕೊಂಡಿದ್ದಾರೆ.
ಇತ್ತೀಚಿಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಂಎಸ್‌ಕೆ ಟ್ರಸ್ಟ್ ವತಿಯಿಂದ ಜೀವನ ಸಾಧನೆ ಪ್ರಶಸ್ತಿ ಬಂದಿತ್ತು. ಅದು ಅಪ್ಪುಗೆ ಎಲ್ಲಿಲ್ಲದ ಸಂತಸವನ್ನು ತಂದುಕೊಟ್ಟಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ಈ ಸೆಲ್ಫೀ ತೆಗೆದು, ರಾಘಣ್ಣ ನಾವು ಕೂಡ ಈ ಮೂರ್ತಿಯ ಹಾಗೆಯೇ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದ್ದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ.. ಲವ್ ಯು ಮಗನೇ".ಎಂದು ಬರೆದುಕೊಂಡಿದ್ದಾರೆ.
Advertisement