The New Indian Express
ಬೆಂಗಳೂರು: ತಾವು ವೃತ್ತಿಯಲ್ಲಿ ವೈದ್ಯರಾಗದೇ ಇರುತ್ತಿದ್ದರೆ ಎಂದೋ ನಿರ್ದೇಶಕನಾಗುತ್ತಿದ್ದೆ ಎನ್ನುತ್ತಾರೆ ಬಿ.ಎಸ್.ರಾಘವೇಂದ್ರ. ಅವರು ವೃತ್ತಿಯಲ್ಲಿ ನ್ಯೂರೋ ಸರ್ಜನ್. ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾಗಳ ಮೇಲಿನ ಆಸಕ್ತಿ ಇಂದು ಅವರನ್ನು ನಿರ್ದೇಶಕ ಸ್ಥಾನದಲ್ಲಿ ಕುಳ್ಳಿರಿಸಿದೆ.
ಇದನ್ನೂ ಓದಿ: ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್
ನವೆಂಬರ್ 12 ಬಿಡುಗಡೆಯಾಗಲಿರುವ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಕಾಲೇಜಿನಲ್ಲಿ ಟಾಪರ್, ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಅವರು ಸಿನಿಮಾರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.
ಇದನ್ನೂ ಓದಿ: ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ರಜನಿಕಾಂತ್ ಸಂತಾಪ; ಅಪ್ಪು ಅಭಿಮಾನಿಗಳ ಆಕ್ರೋಶ
ವೈದ್ಯ ವೃತಿಯನ್ನೂ ಪ್ರೀತಿಸುವ ಅವರು ಇದೀಗ ತಮ್ಮ ಚಿಕ್ಕಂದಿನ ಕನಸನ್ನು ನನಸು ಮಾಡಿಕೊಳ್ಲಲು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸ್ಕ್ರಿಪ್ಟನ್ನು ಅಂಬರೀಷ್ ಅವರಿಗೆ ಮೊದಲು ರಾಘವೇಂದ್ರ ಅವರು ಕೇಳಿಸಿದ್ದರು.
ಇದನ್ನೂ ಓದಿ: ಮದುವೆ ಆದ್ಮೇಲೆ ಫಸ್ಟ್ ನೈಟ್ನಲ್ಲಿ ಏನ್ ಮಾಡ್ತೀರಾ? ಅದನ್ನೇ ಈ ಹಾಡಿನಲ್ಲೂ ಮಾಡಿದ್ದೇವೆ: ನಟಿ ರಚಿತಾ ರಾಮ್
ಚಿತ್ರದ ಸ್ಕ್ರಿಪ್ಟನ್ನು ಅವರು ಬಹಳ ಮೆಚ್ಚಿಕೊಂಡಿದ್ದರು. ಅಲ್ಲದೆ, ಸಿನಿಮಾ ತಯಾರಿ ಸಂದರ್ಭದಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾಗಿ ರಾಘವೇಂದ್ರ ನೆನಪಿಸಿಕೊಳ್ಳುತ್ತಾರೆ. ಸಿನಿಮಾ ಕೆಲಸಗಳು ಶುರುವಾಗುವ ಮೊದಲೇ ಅಂಬರೀಷ್ ನಿಧನರಾಗಿದ್ದಾಗಿ ಬೇಸರ ವ್ಯಕ್ತಪಡಿಸುತ್ತಾರೆ ಅವರು.
ಇದನ್ನೂ ಓದಿ: ಇಸ್ಪೀಟ್ ಅಡ್ಡ ನಡೆಸುತ್ತಿದ್ದ ಖ್ಯಾತ ನಟನ ತಂದೆಯ ಬಂಧನ!
ಸಿನಿಮಾದಲ್ಲಿ ಪ್ರೇಮ್, ಐಂದ್ರಿತಾ ರೇ, ಬೃಂದಾ ಆಚಾರ್ಯ, ಮಾಸ್ಟರ್ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ತ್ಯಾಗರಾಜ ಎಂ.ಎಸ್ ಮತ್ತು ಚರಣ್ ರಾವ್ ಸಂಗೀತ ನೀಡಿದ್ದು ಅವರಿಬ್ಬರೂ ರಾಘವೇಂದ್ರ ಅವರಿಗೆ ಹಿಂದಿನಿಂದಲೂ ಸ್ನೇಹಿತರು. ಸಿನಿಮಾವನ್ನು ಡಾ. ರಕ್ಷಿತ್ ಕೆದಂಬಾಡಿ ಮತ್ತು ಡಾ. ರಾಜಕುಮಾರ್ ಜಾನಕಿರಾಮನ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸಂಗೀತ ನೀಡುವುದು ಸವಾಲಾಗಿತ್ತು: ಮಿದುನ್ ಮುಕುಂದನ್