ಸಿನಿಮಾ ನೋಡಿ ರಾಜ್ ಶೆಟ್ಟಿಗೆ ಕರೆ ಮಾಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್: ಮುಂಬೈಗೆ ಆಹ್ವಾನ
ಅನುರಾಗ್ ಕಶ್ಯಪ್ ದನಿ ಕೇಳುತ್ತಲೇ ರೋಮಾಂಚನಗೊಂಡೆ ಎಂದ 'ಗರುಡ ಗಮನ ವೃಷಭ ವಾಹನ' ನಿರ್ದೇಶಕ ನಟ ರಾಜ್ ಬಿ. ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಫೋನ್ ಸಂಭಾಷಣೆ ಕುರಿತು ವಿವರ ಬಿಚ್ಚಿಟ್ಟಿದ್ದಾರೆ.
Published: 24th November 2021 03:24 PM | Last Updated: 24th November 2021 03:45 PM | A+A A-

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್
ರಾಜ್ ಬಿ. ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ನವೆಂಬರ್ 19ರಂದು ತೆರೆಕಂಡು ಸಿನಿಮಾರಸಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಹೊತ್ತಿನಲ್ಲಿ ಬಾಲಿವುಡ್ ನ ಹೆಸರಾಂತ ಪ್ರಯೋಗಾತ್ಮಕ ನಿರ್ದೇಶಕ ಅನುರಾಗ್ ಕಶ್ಯಪ್ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಒಳ್ಳೆಯ ಮಾತುಗಳನ್ನಾಡಿರುವುದು ಚಿತ್ರತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ
ಗರುಡ ಗಮನ ವೃಷಭ ವಾಹನ ಸಿನಿಮಾ ಸೃಷ್ಟಿಸಿದ buzzನಿಂದ ಸಿನಿಮಾ ನೋಡಿದ ಅನುರಾಗ್ ಕಶ್ಯಪ್ ಸಿನಿಮಾ ಮುಗಿದ ನಂತರ ರಾಜ್ ಬಿ. ಶೆಟ್ಟಿ ಜೊತೆ ಕರೆ ಮಾಡಿ ಮಾತನಾಡಿದ್ದಾರೆ.
ಅನುರಾಗ್ ಕಶ್ಯಪ್ ದನಿ ಕೇಳುತ್ತಲೇ ರೋಮಾಂಚನಗೊಂಡೆ ಎಂದ ರಾಜ್ ಬಿ. ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಫೋನ್ ಸಂಭಾಷಣೆ ಕುರಿತು ವಿವರ ಬಿಚ್ಚಿಟ್ಟಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಕೇವಲ 32 ದಿನಗಳಲ್ಲಿ ಶೂಟ್ ಮಾಡಿದ್ದೆಂದು ತಿಳಿದು ಅನುರಾಗ್ ತೀವ್ರ ಅಚ್ಚರಿಗೊಂಡರು.
ಗರುಡ ಗಮನ ವೃಷಭ ವಾಹನ ಸಿನಿಮಾ ಸುಬ್ರಮಣ್ಯಪುರಂ, ಅಂಗಮಾಲಿ ಡೈರೀಸ್ ಮತ್ತು ತಮ್ಮದೇ ಗ್ಯಾಂಗ್ಸ್ ಆಫ್ ವಸೇಪುರ್ ಸಿನಿಮಾಗಳಿಗಿಂತ ಭಿನ್ನವಾದುದು ಎಂದು ಅನುರಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ ರಾಜ್ ಶೆಟ್ಟಿ ಅವರ ಸಿನಿಮಾ ಮೇಕಿಂಗ್ ಶೈಲಿಯ ಕುರಿತು ಮಾತುಕತೆ ನಡೆಸಲು ಅನುರಾಗ್ ಅವರು ರಾಜ್ ರನ್ನು ಮುಂಬೈಗೆ ಆಹ್ವಾನಿಸಿರುವುದು.
ಇದನ್ನೂ ಓದಿ: ಗರುಡ ಗಮನ ಋಷಭ ವಾಹನ ಸಿನಿಮಾದ ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ ಪ್ರೈಸ್ ಆಗುವುದು ಖಂಡಿತ: ರಿಷಬ್ ಶೆಟ್ಟಿ
ಸಿನಿಮಾದಲ್ಲಿ ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ವಿನೀತ್ ಕುಮಾರ್, ದೀಪಕ್ ರೈ ಪಾಣಾಜೆ ಅಭಿನಯಕ್ಕೆ ಪ್ರೇಕ್ಷಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಮಿದುನ್ ಮುಕುಂದನ್, ಸಿನಿಮೆಟೊಗ್ರಾಫರ್- ಎಡಿಟರ್ ಪ್ರವೀಣ್ ಶ್ರಿಯಾನ್ವರ ನೈಪುಣ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.
ಗರುಡ ಗಮನ ವೃಷಭ ವಾಹನ ಸಿನಿಮಾ ರಕ್ಷಿತ್ ಶೆಟ್ಟಿಯವರ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿ ಬಂದಿದ್ದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣ ಮಾಡಿದೆ
ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸಂಗೀತ ನೀಡುವುದು ಸವಾಲಾಗಿತ್ತು: ಮಿದುನ್ ಮುಕುಂದನ್