The New Indian Express
ಬೆಂಗಳೂರು: ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಅವರಿಗೆ ಗರುಡ ಗಮನ ವೃಷಭ ವಾಹನ (GGVV) ಸಿನಿಮಾ 11ನೇ ಸಿನಿಮಾ. ಸಿನಿಮಾ ನಿರ್ದೇಶಿಸಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಜೊತೆ ಈ ಹಿಂದೆ ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು. ಹೀಗಾಗಿ ರಾಜ್ ಬಿ. ಶೆಟ್ಟಿ ಜೊತೆ ಮಿದುನ್ ಅವರಿಗೆ ಇದು ಎರಡನೇ ಸಿನಿಮಾ.
ಇದನ್ನೂ ಓದಿ: ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ
GGVV ಸಿನಿಮಾಗೆ ಸಂಗೀತ ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ ಮಿದುನ್. ಸಿನಿಮಾದ ಸಂಗೀತ ಕೆಲಸ ಪೂರ್ತಿಯಾಗಿ ಕೊರೊನಾ ಲಾಕ್ ಡೌನ್ ಸಮಯದಲ್ಲೇ ನಡೆದಿತ್ತು. ಕಷ್ಟಕರ ಸಮಯದಲ್ಲಿ ಕ್ರಿಯಾಶೀಲರಾಗಿರುವುದೇ ಅತ್ಯಂತ ಸವಾಲಾಗಿ ಪರಿಣಮಿಸಿತ್ತು. ಕೇವಲ ನನಗೆ ಅಂತಲ್ಲ ಸಿನಿಮಾಗೆ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಅದು ಕಷ್ಟಕರ ಸಮಯವಾಗಿತ್ತು.
ಇದನ್ನೂ ಓದಿ: 'ಗರುಡ ಗಮನ ವೃಷಭ ವಾಹನ' ಚಿತ್ರ ನೇರ ಒಟಿಟಿ ಬಿಡುಗಡೆ ಇಲ್ಲ: ರಾಜ್ ಬಿ. ಶೆಟ್ಟಿ
ಸಿನಿಮಾ ಶುರುವಾಗುವುದಕ್ಕೂ ಮೊದಲು ನಿರ್ದೇಶಕ ರಾಜ್ ಬಿ. ಶೆಟ್ಟಿ ಯಾವರೀತಿ ಸಿನಿಮಾ ಬರಬೇಕು ಅಂದುಕೊಂಡಿದ್ದರೂ ಕಡೆಯವರೆಗೂ ಅದರಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಮೂಲಸ್ವರೂಪದಂತೆಯೇ ಎಲ್ಲವೂ ಬಂದಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಮಿದುನ್.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!
GGVV ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಥಿಯೇಟರಿನಲ್ಲಿ ಯಾವರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಮಿದುನ್ ಅವರಿಗೆ ತುಂಬಾ ಇದೆ. ಲೈಟರ್ ಬುದ್ಧ ಫಿಲಂ ಬ್ಯಾನರ್ ಅಡಿ ತಯಾರಾಗಿರುವ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ಪ್ರಸ್ತುತ ಪಡಿಸುತ್ತಿದೆ.
ಇದನ್ನೂ ಓದಿ: 'ನನ್ನ ಬಳಿ ಇರುವ ಅಸ್ತ್ರ...': ಖಾಸಗಿ ಸುದ್ದಿ ವಾಹಿನಿ ವಿರುದ್ಧ ಹರಿಹಾಯ್ದ ನಟ ರಕ್ಷಿತ್ ಶೆಟ್ಟಿ!