
ಬೆಂಗಳೂರು: ಒಂದು ಮೊಟ್ಟೆಯ ಕಥೆ, ಮಾಯಾಬಜಾರ್ ಸಿನಿಮಾಗಳ ಖ್ಯಾತಿಯ ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ತಮ್ಮ ಪರಂವಾಹ್ ಬ್ಯಾನರ್ ಬಿಡುಗಡೆಗೊಳಿಸುತ್ತಿರುವುದಾಗಿ ರಕ್ಷಿತ್ ಶೆಟ್ಟಿ ಘೋಷಿಸಿದ್ದಾರೆ. ಗ್ಯಾಂಗ್ ಸ್ಟರ್ ಚಿತ್ರವಾದ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿಯವರಿಗೆ ಎದುರಾಗಿ ರಿಷಭ್ ಶೆಟ್ಟಿ ನಟಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ, ತಾವು ಈ ಸಿನಿಮಾವನ್ನು ವೀಕ್ಷಿಸಿದ್ದು, ಪ್ರೇಕ್ಷಕರಿಗೆ ತಮ್ಮ ಪ್ರೊಡಕ್ಷನ್ ತಂಡದ ವತಿಯಿಂದ ಇಂಥ ಒಳ್ಳೆಯ ಸಿನಿಮಾವನ್ನು ಸಾದರ ಪಡಿಸಲು ಹೆಮ್ಮೆಯಾಗುತ್ತಿದೆ ಎಂಡು ಹೇಳಿದ್ದಾರೆ. ಈ ಹಿಂದೆ ಲೂಸಿಯ, ರಾಮಾ ರಾಮಾ ರೇ, ದಿಯಾ ಸಿನಿಮಾಗಳ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದ್ದೆ. ಒಳ್ಳೆಯ ಪ್ರಾಜೆಕ್ಟ್ ಗಳ ಬಗ್ಗೆ ಪ್ರಚಾರ ನೀಡಲು ನಾನು ಸದಾ ಸಿದ್ಧ ಎಂದು ರಕ್ಷಿತ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ ಬಿ ಶೆಟ್ಟಿ ತಾವು ಈ ಹಿಂದೆ ನಿರ್ಮಿಸಿದ್ದ ಒಂದು ಮೊಟ್ಟೆಯ ಕಥೆ ಸಿನಿಮಾಗೆ ಪವನ್ ಕುಮಾರ್ ಪ್ರೋತ್ಸಾಹ ಲಭ್ಯವಾಗಿತ್ತು. ಇದೀಗ ತಮ್ಮ ನಿರ್ದೇಶನದ ಎರಡನೇ ಸಿನಿಮಾವನ್ನು ಮೆಚ್ಚಿಕೊಂಡು ಪ್ರೇಕ್ಷಕರೆದುರು ತರುವಲ್ಲಿ ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತಿದ್ದಾರೆ. ಇದು ನನ್ನ ಅದೃಷ್ಟ ಎಂದಿದ್ದಾರೆ.
ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ
ಸೂರಿ 'ಬ್ಯಾಡ್ ಮ್ಯಾನರ್ಸ್' ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿಷೇಕ್!
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು
'ಮಿಸ್ ನಂದಿನಿ' ಸಿನಿಮಾದಲ್ಲಿ ಟೀಚರ್ ಆಗಿ ಮಕ್ಕಳಿಗೆ ಪಾಠ ಹೇಳಲು ಬರುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ!
ತಾಯಿಯ ಸಾವಿನ ಬೆನ್ನಲ್ಲೇ ಕರ್ನಾಟಕ ಬಿಟ್ಟು ಹೋಗುವುದಾಗಿ ಹೇಳಿದ ನಟಿ ವಿಜಯಲಕ್ಷ್ಮಿ!
Advertisement