ಬೆಂಗಳೂರು: ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ನಟಿ ವಿಜಯಲಕ್ಷ್ಮಿ ಇದೀಗ ತಾವು ಕರ್ನಾಟಕವನ್ನು ಬಿಟ್ಟು ಹೋಗುತ್ತಿರುವುದಾಗಿ ಹೇಳಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಟಿ ತಮಗೆ ಸಹಾಯ ಮಾಡುವಂತೆ ಕನ್ನಡದ ಹಲವಾರು ನಟರಿಗೆ ಮನವಿ ಮಾಡಿದ್ದರು. ಇದೇ ವಿಚಾರವಾಗಿ ಹಲವಾರು ಬಾರಿ ಲೈವ್ ಬಂದು ತಮ್ಮ ಸಂಕಷ್ಟವನ್ನು ತೊಡಿಕೊಂಡಿದ್ದಾರೆ. ಏಪ್ರಿಲ್ ನಿಂದ ಇಲ್ಲಿಯವರೆಗೆ ಕಷ್ಟಪಡುತ್ತಿದ್ದೇನೆ. ನನಗೆ ಬಹಳ ನೋವಾಗಿದೆ. ಕರ್ನಾಟಕ ಬಿಟ್ಟು ಹೋಗುತ್ತಿದ್ದೇನೆ. ಯಾರ ಕಣ್ಣಿಗೂ ಕಾಣಲ್ಲ ಎಂದು ಹೇಳಿದ್ದಾರೆ.
ಯೋಗೇಶ್ ಎಂಬುವರ ನಟಿ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಅದರಂತೆ ಜನರು 3 ಲಕ್ಷ ರೂಪಾಯಿ ಹಾಕಿದ್ದು ಆ ಹಣ ನನಗೆ ಬೇಡ. ನಾನು ನನ್ನು ಅಕ್ಕನನ್ನು ಕರೆದುಕೊಂಡು ದೂರ ಹೋಗುತ್ತೇನೆ ಎಂದು ಹೇಳಿದ್ದಾರೆ.
ಯೋಗೇಶ್ ಖಾತೆಯಲ್ಲಿರುವ ಹಣ ಇನ್ನು ನನಗೆ ಸಿಕ್ಕಿಲ್ಲ. ಇದರ ಮಧ್ಯೆ ಕೆಲವರು ನನ್ನ ವಿರುದ್ಧ ವಿಡಿಯೋ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು, ಕೇಳಿಸಿಕೊಂಡು ಇಲ್ಲಿ ಇರುವುದಕ್ಕೆ ನನಗೆ ಸಾಧ್ಯವಾಗುತ್ತಿಲ್ಲ ಎಂದು ಬೇರಸ ವ್ಯಕ್ತಪಡಿಸಿದ್ದಾರೆ.
Advertisement