Vijayalakshmi

ವಿಜಯಲಕ್ಷ್ಮಿ ಜತೆ ಜಟಾಪಟಿ: ನಟ ಧನ್ವೀರ್ಗೆ ಬಿಗ್ ರಿಲೀಫ್; ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ!
ವಿಜಯಲಕ್ಷ್ಮಿ ಅವರನ್ನು ನಿಂದಿಸಿದ ಆರೋಪದ ಮೇಲೆ ನಟ ಧನ್ವೀರ್ ವಿರುದ್ಧ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ ತಾರಕಕ್ಕೆ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ
ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

'ಅಭಿಮಾನ ಇರಲಿ, ಹೆಣ್ಣಿನ ಗೌರವಕ್ಕೆ ಧಕ್ಕೆ ಬೇಡ'; ದರ್ಶನ್-ವಿಜಯಲಕ್ಷ್ಮಿ ವಿವಾದದ ನಡುವೆ ಅಶ್ವಿನಿ ಗೌಡ ಪೋಸ್ಟ್!
ಸಂಬಂಧಗಳಲ್ಲಿ ಮನಸ್ತಾಪ ಉಂಟಾದಾಗ, ಇಷ್ಟು ದಿನ ಹಂಚಿಕೊಂಡ ಪ್ರೀತಿ, ವಿಶ್ವಾಸ ಹಾಗೂ ಕಷ್ಟ-ಸುಖಗಳನ್ನು ಮರೆತು, ಅದೇ ಸಂಬಂಧಗಳನ್ನು ನೋಯಿಸುವ ಅಸ್ತ್ರಗಳನ್ನಾಗಿ ಬಳಸುವುದು ನೋವಿನ ಸಂಗತಿ. ಒಬ್ಬ ಹೆಣ್ಣಿನ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು.

ಧನ್ವೀರ್ ಆಡಿಯೋ ವಿವಾದ: ದರ್ಶನ್ ಭೇಟಿಯಾಗಲು ನಟ ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮೀ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಶೀತಲ ಸಮರ ನಡೆಯುತ್ತಿದೆ. ಈ ಮಧ್ಯೆ ವಿಜಯಲಕ್ಷ್ಮೀ ನಟ ಝೈದ್ ಖಾನ್ ಜೊತೆ ಸೇರಿ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ.

ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ PR ಮಾಡಿ, ಆದ್ರೆ ನನ್ನ ಹೃದಯದ ಬಾಗಿಲಲ್ಲಿ...: ದರ್ಶನ್ ಬಗ್ಗೆ ಧನ್ವೀರ್ ಪೋಸ್ಟ್ ವೈರಲ್!
ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ...

'ಮನೆಯವರಿಗೆ ಬೇಗ ಕೊಡು ಅಂದಿದ್ನಲ್ಲ ಚಿನ್ನ': ಧನ್ವೀರ್ಗೆ ಸ್ವತಃ ದರ್ಶನ್ ಹೇಳಿದ್ರೂ ಹಣ ಕೊಟ್ಟಿಲ್ಲ: ವೇಲು ನಾಯ್ಕರ್ ಆರೋಪ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದ ಇದೀಗ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು.

ರೇಣುಕಾಸ್ವಾಮಿ ಹತ್ಯೆ ಕೇಸು: ದರ್ಶನ್ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ
ಪ್ರಕರಣದ 14ನೇ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿದೆ.

ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ D Boss: ದರ್ಶನ್-ವಿಜಯಲಕ್ಷ್ಮಿಯಿಂದ ಮೂರು ಅರ್ಜಿ ಸಲ್ಲಿಕೆ!
ಮಾಫಿ ಸಾಕ್ಷಿ ವಿರುದ್ಧ ಎರಡೇರಡು ಬಾರಿ ಹೈಕೋರ್ಟ್ ಹಾಗೂ ವಿಚಾರಣಾ ಕೋರ್ಟ್ ಕದ ತಟ್ಟಿದ್ದ ನಟ ದರ್ಶನ್ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

'ಒಂದು ವರ್ಷ ಕಳೆದರೂ, ಆ ನೋವಿನ್ನು ವಾಸಿಯಾಗಿಲ್ಲ'; ನಟ ದರ್ಶನ್ ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ!
ಇದಕ್ಕೂ ಮುನ್ನ, ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಮಾಕ್ಯ ದೇವಿಯ ಚಿತ್ರವೊಂದನ್ನು ಹಂಚಿಕೊಂಡು, 'ದೇವರಿಗೆ ಗೊತ್ತು, ಅಷ್ಟೇ ಸಾಕು' ಎಂದು ಬರೆದುಕೊಂಡಿದ್ದರು.

