ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ D Boss: ದರ್ಶನ್-ವಿಜಯಲಕ್ಷ್ಮಿಯಿಂದ ಮೂರು ಅರ್ಜಿ ಸಲ್ಲಿಕೆ!

ಮಾಫಿ ಸಾಕ್ಷಿ ವಿರುದ್ಧ ಎರಡೇರಡು ಬಾರಿ ಹೈಕೋರ್ಟ್ ಹಾಗೂ ವಿಚಾರಣಾ ಕೋರ್ಟ್ ಕದ ತಟ್ಟಿದ್ದ ನಟ ದರ್ಶನ್ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
Actor Darshan - Supreme Court
ನಟ ದರ್ಶನ್ ಮತ್ತು ಸುಪ್ರೀಂ ಕೋರ್ಟ್
Updated on: 

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ತಮ್ಮ ವಿರುದ್ಧವೇ ತಿರುಗಿಬಿದ್ದು, ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿದ ಪ್ರದೋಷ್ ರಾವ್ ನನ್ನು ತಡೆಯಲು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಮಾಫಿ ಸಾಕ್ಷಿ ವಿರುದ್ಧ ಎರಡೇರಡು ಬಾರಿ ಹೈಕೋರ್ಟ್ ಹಾಗೂ ವಿಚಾರಣಾ ಕೋರ್ಟ್ ಕದ ತಟ್ಟಿದ್ದ ನಟ ದರ್ಶನ್ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಸಹ ಮೇಲ್ಮನವಿ ಸಲ್ಲಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಒಟ್ಟು 3 ಮೇಲ್ಮನವಿಗಳನ್ನು ದರ್ಶನ್ ಸಲ್ಲಿಸಿದ್ದಾರೆ.

Actor Darshan - Supreme Court
ಕೋರ್ಟ್​ನಲ್ಲಿ ಸತತ ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ಪ್ರದೋಷ್; ದರ್ಶನ್ ಬಗ್ಗೆ ಹೇಳಿದ್ದೇನು?

ಇದೇ ವಾರ ದರ್ಶನ್ ಅರ್ಜಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ಸಹ ಆರೋಪಿಯ ವಾದ ಕೇಳಬೇಕಿಲ್ಲ ಎಂದು ಹೈಕೋರ್ಟ್ ನೀಡಿರುವ ತೀರ್ಪುನ್ನು ಪ್ರಶ್ನಿಸಿ ದರ್ಶನ್ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಮಧ್ಯೆ ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ದರ್ಶನ್ ಆಪ್ತ ಪ್ರದೋಷ್ ರಾವ್ ಅವರು ಸೋಮವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ, ಸತತ ಮೂರು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸಿದ್ದಾರೆ.

ಭದ್ರತೆಯೊಂದಿಗೆ ಕೋರ್ಟ್‌ಗೆ ಹಾಜರಾದ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಗೊತ್ತಿಲಿರುವ ಹಲವು ಘಟನೆಗಳ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಇಂದು ಸಹ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com