ಕೋರ್ಟ್​ನಲ್ಲಿ ಸತತ ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ಪ್ರದೋಷ್; ದರ್ಶನ್ ಬಗ್ಗೆ ಹೇಳಿದ್ದೇನು?

ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೋಮವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದ ಪ್ರದೋಷ್, ಸತತ ಮೂರು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸಿದ್ದಾರೆ.
Renukaswamy murder case: Accused-turned-approver Pradosh record statement in Bengaluru court
ಪ್ರದೋಷ್
Updated on: 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ತಮ್ಮ ವಿರುದ್ಧವೇ ತಿರುಗಿಬಿದ್ದು, ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿದ ಪ್ರದೋಷ್ ರಾವ್ ನನ್ನು ತಡೆಯಲು ಹಲವು ಕಸರತ್ತುಗಳನ್ನು ನಡೆಸಿ ವಿಫಲಾಗಿದ್ದಾರೆ.

ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೋಮವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದ ಪ್ರದೋಷ್, ಸತತ ಮೂರು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸಿದ್ದಾರೆ.

ಭದ್ರತೆಯೊಂದಿಗೆ ಕೋರ್ಟ್‌ಗೆ ಹಾಜರಾದ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಗೊತ್ತಿಲಿರುವ ಹಲವು ಘಟನೆಗಳ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.

Renukaswamy murder case: Accused-turned-approver Pradosh record statement in Bengaluru court
ಮಾಫಿ ಸಾಕ್ಷಿ ತಡೆಯಲು ದರ್ಶನ್ ಹಲವು ಕಸರತ್ತು: ಪ್ರದೋಷ್ ಹೇಳಿಕೆ ದಾಖಲು ಮುಂದೂಡಿಕೆ ಕೋರಿ ಮತ್ತೊಂದು ಅರ್ಜಿ!

ಪ್ರದೋಷ್ ನೀಡಿರುವ ಸುದೀರ್ಘ ಹೇಳಿಕೆಯನ್ನು ಪ್ರಿಂಟ್ ಔಟ್ ತೆಗೆದು ಅದಕ್ಕೆ ಸಹಿ ಪಡೆಯುವ ಹಿನ್ನೆಲೆಯಲ್ಲಿ ಹಾಗೂ ಎಸ್ ಪಿಪಿ ಅವರ ಮನವಿಯ ಮೇರೆಗೆ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.

ಈ ಮಧ್ಯೆ ದರ್ಶನ್ ಪರ ವಕೀಲರು ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ)ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಪರ ವಕೀಲರೂ ತ್ವರಿತ ವಿಚಾರಣೆಗೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ದರ್ಶನ್ ಪರಿಚಯದ ಬಗ್ಗೆ ಪ್ರದೋಷ್ ಹೇಳಿದ್ದೇನು?

೨೦೦೩ರಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದ ಸಂದರ್ಭದಲ್ಲಿ ದರ್ಶನ್ ಅವರ ಪರಿಚಯವಾಯಿತು.ಕಾಲಕ್ರಮೇಣ ಇಬ್ಬರೂ ಆತ್ಮೀಯ ಸ್ನೇಹಿತರಾದರು ಎಂದು ಪ್ರದೋಷ್ ಹೇಳಿಕೆ ನೀಡಿದ್ದಾರೆ.

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ಹೋಗುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

೨೦೨೪ರ ಜೂನ್ ೮ರಂದು ಶನಿವಾರ ರಜೆ ಇದ್ದ ಕಾರಣ ಗಿರಿನಗರದ ಮನೆಯಿಂದ ಬೈಕ್‌ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್‌ನ ಮನೆಗೆ ತೆರಳಿದ್ದೆ. ಆಗ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು ಎಂದು ಪ್ರದೋಷ್ ಹೇಳಿದ್ದಾರೆ.

ದರ್ಶನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಬಳಿಕ ಅವರ ಶೂಟಿಂಗ್ ಬಗ್ಗೆ ಸುಮಾರು ೧೫ ನಿಮಿಷ ಮಾತನಾಡಿದ್ದೆ.ಮಗಳನ್ನು ಸ್ವಿಮ್ಮಿಂಗ್‌ಗೆ ಕರೆದುಕೊಂಡು ಹೋಗಬೇಕಿರುವುದರಿಂದ ಮನೆಗೆ ತೆರಳುವುದಾಗಿ ತಿಳಿಸಿದ್ದೆ. ಆದರೆ, ಮಧ್ಯಾಹ್ನ ವಿನಯ್ ಅವರ ಸ್ಟೋನಿ ಬ್ರೂಕ್‌ನಲ್ಲಿ ಸಣ್ಣ ಪಾರ್ಟಿ ಇದೆ, ಬರುವಂತೆ ದರ್ಶನ್ ಒತ್ತಾಯಿಸಿದರು ಎಂದು ಹೇಳಿದ್ದಾರೆ.

ಸ್ಟೋನಿ ಬ್ರೂಕ್‌ಗೆ ತೆರಳಿದ ತಂಡ

ನಾನು ಸುಸ್ತಾಗಿದ್ದೇನೆ, ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ದರ್ಶನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಾರ್ಟಿಗೆ ತೆರಳಲು ಒಪ್ಪಿಕೊಂಡೆ. ನಂತರ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅವರ ಮನೆಗೆ ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಬಂದೆ ಎಂದು ಪ್ರದೋಷ್ ಹೇಳಿದ್ದಾರೆ.

ನಟ ದರ್ಶನ್ ಮನೆಯಿಂದ ನಾಗರಾಜ್ ಕೂಡ ಕಾರಿನಲ್ಲಿ ಸೇರಿಕೊಂಡರು.ಅಲ್ಲಿಂದ ಆರ್.ಆರ್.ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ,ಕಾರಿನಲ್ಲೇ ದರ್ಶನ ಪಡೆದ ಬಳಿಕ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ತೆರಳಿದ್ದೆವು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com