ಬೆಂಗಳೂರು: ವಿಭಿನ್ನ ಕಥಾವಸ್ತು ಹೊಂದಿರುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಮುಂದಿನ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಸ್ ನಂದಿನಿ ಎನ್ನುವ ಹೆಸರಿನ ಈ ಸಿನಿಮಾವನ್ನು ಎಸ್ ಆರ್ ಗುರುದತ್ತ ಅವರು ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ: 'ಶಬರಿ ಸೆರ್ಚಿಂಗ್ ಫಾರ್ ರಾವಣ' ಪೋಸ್ಟರ್ ರಿವೀಲ್: ಹೊಸ ಗೆಟಪ್ ನಲ್ಲಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್!
ಮಿಸ್ ನಂದಿನಿ ಮಕ್ಕಳ ಚಿತ್ರವಾಗಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ. ಸರ್ಕಾರಿ ಶಾಲೆ ಖಾಸಗಿ ಶಾಲೆಯ ಗುಣಮಟ್ಟಕ್ಕೆ ಏರಲು ಸಾಧ್ಯ ಎನ್ನುವ ಎಳೆ ಸಿನಿಮಾದಲ್ಲಿ ಇರಲಿದೆ.
ನಿಜಜೀವನದಲ್ಲಿ ಶಿಕ್ಷಕಿಯಾಗುವ ಆಸೆ ಮತ್ತು ಅವಕಾಶಗಳಿದ್ದವು. ಆದರೆ ಕಾರಣಾಂತರಗಳಿಂದ ಶಿಕ್ಷಕಿಯಾಗಲು ಸಾಧ್ಯವಾಗಲಿಲ್ಲ. ಆದರೆ ಆ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ಬೆಳ್ಳಿಪರದೆ ಮೇಲೆ ಶಿಕ್ಷಕಿಯಾಗುತ್ತಿದ್ದೇನೆ ಎಂದು ಪ್ರಿಯಾಂಕಾ ಉಪೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್
ಆರ್ ಕೆ ಬ್ಯಾನರ್ ಅಡಿ ಮಿಸ್ ನಂದಿನಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಾಯಿ ಸರ್ವೇಶ್ ಅವರು ಸಂಗೀತ ನಿರ್ದೇಶನ ಹೊಣೆ ಹೊತ್ತಿದ್ದರೆ, ವೀರೇಶ್ ಅವರು ಸಿನಿಮೆಟೋಗ್ರಾಫರ್ ಆಗಿದ್ದಾರೆ.
ಇದನ್ನೂ ಓದಿ: ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ