The New Indian Express
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಮತ್ತು ಇಕ್ಕಟ್ ಖ್ಯಾತಿಯ ನಾಗಭೂಷಣ್ ಜೋಡಿಯಾಗಿ ನಟಿಸುತ್ತಿರುವ ನೂತನ ಸಿನಿಮಾ ಚಿತ್ರೀಕರಣ ಪ್ರಾರಂಭಗೊಂಡಿದೆ.
ಇದನ್ನೂ ಓದಿ: 'ಇಕ್ಕಟ್' ಒಂದು ವಿಶಿಷ್ಟ ಲಾಕ್ಡೌನ್ ಸಿನೆಮಾ
ಈ ಸಿನಿಮಾ ಮೂಲಕ ಪ್ರೀತಂ ತಗ್ಗಿನಮನೆ ಮೊದಲ ಬಾರಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರೀತಂ ಅವರು ಅಯೋಗ್ಯ ಮತ್ತು ರತ್ನಮಂಜರಿ ಸಿನಿಮಾಗಳಿಗೆ ಸಿನಿಮೆಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: ಯಾವುದೇ ಗಡಿಗಳಿಲ್ಲದ ತೆರೆದ ಪುಸ್ತಕವಾಗಲು ಬಯಸುತ್ತೇನೆ: 'ಇಕ್ಕಟ್' ನಟಿ ಭೂಮಿ ಶೆಟ್ಟಿ
ಲಮಕ್, ಅಯೋಗ್ಯ, ಬೀರ್ ಬಲ್ ಚಿತ್ರಗಳನ್ನು ನಿರ್ಮಿಸಿದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್, ಟಿ.ಆರ್ ಚಂದ್ರಶೇಖರ್ ಮತ್ತು ನಂದ ಕಿಶೋರ್ ಜೊತೆ ಸೇರಿ ನೂತನ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ.
ನಾಗಭೂಷಣ್ ಅವರು ಲಾಕ್ ಡೌನ್ ಕುರಿತಾದ ಇಕ್ಕಟ್ ಸಿನಿಮಾದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಎರಡು ಸಿನಿಮಾಗಳು ಅರ್ಜುನ್ ಗೌಡ ಮತ್ತು ಶುಗರ್ ಲೆಸ್ ಬಿಡುಗಡೆಗೆ ಸಿದ್ಧವಾಗಿವೆ.
ಇದನ್ನೂ ಓದಿ: ಅಭಿಷೇಕ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಅಕ್ಟೋಬರ್ 5 ರಿಂದ ಪುನಾರಂಭ!