ಯಾವುದೇ ಗಡಿಗಳಿಲ್ಲದ ತೆರೆದ ಪುಸ್ತಕವಾಗಲು ಬಯಸುತ್ತೇನೆ: 'ಇಕ್ಕಟ್' ನಟಿ ಭೂಮಿ ಶೆಟ್ಟಿ

'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ನಂತರ ಬಿಗ್ ಬಾಸ್‌ನಲ್ಲೂ ಗಮನಸೆಳೆದಿದ್ದ ನಟಿ ಭೂಮಿ ಶೆಟ್ಟಿ ಇಕ್ಕಟ್ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದಾರೆ.
ಭೂಮಿ ಶೆಟ್ಟಿ
ಭೂಮಿ ಶೆಟ್ಟಿ

'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ನಂತರ ಬಿಗ್ ಬಾಸ್‌ನಲ್ಲೂ ಗಮನಸೆಳೆದಿದ್ದ ನಟಿ ಭೂಮಿ ಶೆಟ್ಟಿ ಇಕ್ಕಟ್ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದಾರೆ. 

ಈ ಚಿತ್ರವನ್ನು ಪವನ್ ಕುಮಾರ್ ಸ್ಟುಡಿಯೋಸ್ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ನಿರ್ಮಿಸಿದ್ದು, ಈಶಮ್ ಹಾಗೂ ಹಸೀನ್ ಖಾನ್ ಜೋಡಿ ನಿರ್ದೇಶಿಸಿದ್ದಾರೆ,

ಸಾಕಷ್ಟು ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡು ಭೂಮಿ ಶೆಟ್ಟಿಯವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಜೊತೆಗೆ ಮಾತನಾಡಿರುವ ಭೂಮಿ ಶೆಟ್ಟಿಯವರು, ಯಾವುದೇ ಗಡಿ ಇಲ್ಲದ ತೆರೆದ ಪುಸ್ತಕವಾಗುವುದು ನನ್ನ ಬಯಕೆಯಾಗಿದೆ. ಚಿತ್ರದಲ್ಲಿ ಅನನ್ಯವಾದ ಹಾಗೂ ಜನರಿಗೆ ಪ್ರೇರಣೆ ನೀಡುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ. ನನ್ನನ್ನು ನಾನು ಮಿತಿಗೊಳಿಸಲು ಬಯಸುವುದಿಲ್ಲ. ಹೀಗಾಗಿ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಲು ನಾನು ಸಿದ್ಧಳಿದ್ದೇನೆಂದು ಭೂಮಿ ಶೆಟ್ಟಿಯವರು ಹೇಳಿದ್ದಾರೆ. 

ಚಿತ್ರ ನೋಡಿದ ಪ್ರೇಕ್ಷಕರು ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುತ್ತಾರೆಂಬ ವಿಶ್ವಾಸವಂತೂ ನನಗಿದೆ. ಭಾರತದ ಪ್ರತೀ ದಂಪತಿಗಳೂ ಈ ಪರಿಸ್ಥಿತಿಯನ್ನು ಅನುಭವಿಸಿರುತ್ತಾರೆ. ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನದ ಹಂತದಲ್ಲಿದ್ದ ದಂಪತಿ ಲಾಕ್‌ಡೌನ್‌ ಕಾರಣದಿಂದಾಗಿ ಜೊತೆಗಿರಬೇಕಾದ ಸಂದರ್ಭ ಬರುತ್ತದೆ. ಆ ಸಂದರ್ಭ ಹೇಗಿರುತ್ತದೆ ಎಂಬುದನ್ನು ಹಾಸ್ಯಮಯ ಶೈಲಿಯಲ್ಲಿ ಚಿತ್ರದಲ್ಲಿ ನಿರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇಕ್ಕಟ್ ಚಿತ್ರ ಅನಿರೀಕ್ಷಿತವಾಗಿ ಸಿಕ್ಕ ಅವಕಾಶವಾಗಿದೆ. ಲಾಕ್ಡೌನ್ ವೇಳೆ ಕೆಲಸವಲ್ಲದೆ ಪ್ರತೀಯೊಬ್ಬರೂ ಮನೆಯಲ್ಲಿ ಕುಳಿತಿರುವ ಸಂದರ್ಭದಲ್ಲಿ ನನಗೆ ಅವಕಾಶ ಸಿಕ್ಕಿತ್ತು. ನಿಜಕ್ಕೂ ಬಹಳ ಆಶ್ಚರ್ಯವಾಗಿತ್ತು. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿಯೇ ಚಿತ್ರದ ಚಿತ್ರೀಕರಣ ನಡೆದಿತ್ತು. ಬಹಳಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ನಡೆಸಲಾಗಿತ್ತು. ಇಕ್ಕಟ್ ಚಿತ್ರದಲ್ಲಿ ಪ್ರತೀಯೊಂದೂ ವಿಶೇಷವೇ. ಇದೊಂದು ಲಾಕ್ಡೌನ್'ಗೆ ಸಂಬಂಧಿಸಿದ ಕಥೆಯಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಒಂದೇ ಸ್ಥಳದಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com