ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
ಬೆಂಗಳೂರು: ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಅವರ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಪಾತ್ರದಲ್ಲಿ ನಾಯಕನಾಗಿ ಜಗ್ಗೇಶ್ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಹೊರಬಂದಿತ್ತು.
ರಾಘವೇಂದ್ರ ಸ್ಟೋರ್ಸ್ ಗುಂಗಿನಿಂದ ಪ್ರೇಕ್ಷಕ ಹೊರಬರುವ ಮುನ್ನವೇ ಜಗ್ಗೇಶ್ ಪ್ರೀಮಿಯರ್ ಪದ್ಮಿನಿ ಸಿನಿಮಾದ ಎರಡನೇ ಭಾಗ ಸಿನಿಮಾ ಘೋಷಣೆ ಮಾಡಿದ್ದಾರೆ.
ಪ್ರೀಮಿಯರ್ ಪದ್ಮಿನಿ ನಿರ್ದೇಶಕ ರಮೇಶ್ ಇಂದಿರಾ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ಇತ್ತೀಚಿಗಷ್ಟೆ ಸಿನಿಮಾ ಕಥೆ ಕುರಿತು ಮಾತುಕತೆ ನಡೆಸುವ ಸಲುವಾಗಿ ಜಗ್ಗೇಶ್ ಅವರನ್ನು ಭೇಟಿ ಮಾಡಿದ್ದಾಗಿ ಶ್ರುತಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಜಗ್ಗೇಶ್, ಪ್ರಮೋದ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.
ಈ ಸಿನಿಮಾದ ಪ್ರಾಜೆಕ್ಟ್ ವರ್ಷದ ಹಿಂದೆಯೇ ಶುರುವಾಗಬೇಕಿತ್ತು. ಕೊರೊನಾ ಸಾಂಕ್ರಾಮಿಕ ಕಾರಣದಿಂದ ಸಿನಿಮಾಪ್ ರಾಜೆಕ್ಟ್ ಮುಂದೂಡಲ್ಪಟ್ಟಿತ್ತು. ಈ ಹಿಂದೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್, ಪ್ರಮೋದ್, ಮಧು, ಸುಧಾರಾಣಿ, ಹಿತ ಚಂದ್ರಶೇಖರ್, ವಿವೇಕ್ ಸಿಂಹ ರಮೇಶ್ ಇಂದಿರಾ, ದತ್ತಣ್ಣ, ಭಾರ್ಗವಿ ನಾರಾಯಣ್ ಮತ್ತಿತರರು ನಟಿಸಿದ್ದರು.
Related Article
ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನಟ ಜಗ್ಗೇಶ್ ರಿಂದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ!
ಅಧಮ, ನಾಯಿ ಪದ ಬಳಕೆ ಮಾಡಿದ್ದ ಜಗ್ಗೇಶ್ ವಿರುದ್ಧ ದೂರು ದಾಖಲು
ಮಹಾನಟಿ ಜಯಂತಿಯವರದು ಮಗುವಿನಂತಹ ಮನಸ್ಸು, 'ಲವ್ ಯೂ ಅಮ್ಮ': ನಟ ಜಗ್ಗೇಶ್
ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ: ದರ್ಶನ್-ಇಂದ್ರಜಿತ್ ಪ್ರಕರಣಕ್ಕೆ ಜಗ್ಗೇಶ್ ಪ್ರತಿಕ್ರಿಯೆ
ನಾನು ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ ಆಗಿದ್ದರೇ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಲಿ: ವಿಜಯಲಕ್ಷ್ಮಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ