ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್

ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸಹ ನಿರ್ದೇಶಕರಾಗಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗಳಂದಲೇ ತಮಗೆ ಪರಿಚಯ. ಅವರು ಕನ್ನಡ ಚಿತ್ರರಂಗದ ಟಾಪ್ ಡೈರೆಕ್ಟರ್ ಆಗುತ್ತಾರೆ ಎಂದು ನನಗೆ ಮೊದಲೇ ಗೊತ್ತಿತ್ತು ಎಂದು ಜಗ್ಗೇಶ್ ಹೇಳಿದ್ದಾರೆ.
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ನಿಂದ ಹೊರ ಬರುತ್ತಿರುವ 12ನೇ ಚಿತ್ರ ''ರಾಘವೇಂಡ್ರ ಸ್ಟೋರ್ಸ್- ಸಿನ್ಸ್ 1972''  ಕುರಿತಾಗಿ ನಾಯಕ ನಟ ಜಗ್ಗೇಶ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿ. ಅಂಡ್ ಮಿಸಸ್ ರಾಮಾಚಾರಿ ನಿರ್ದೇಶಕ ಸಂತೋಷ್ ಆನಂದ ರಾಮ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. 

ಸಿನಿಮಾ ಶೂಟಿಂಗ್ ನವೆಂಬರ್ 22ರಿಂದ ಪ್ರಾರಂಭಗೊಳ್ಳಲಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸಹ ನಿರ್ದೇಶಕರಾಗಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ದಿನಗಳಂದಲೇ ತಮಗೆ ಪರಿಚಯ ಎಂದು ಜಗ್ಗೇಶ್ ಹೇಳಿದ್ದಾರೆ. ಅವರು ಕನ್ನಡ ಚಿತ್ರರಂಗದ ಟಾಪ್ ಡೈರೆಕ್ಟರ್ ಆಗುತ್ತಾರೆ ಎಂದು ನನಗೆ ಮೊದಲೇ ಗೊತ್ತಿತ್ತು. ಅವರು ಫೇಮಸ್ ಆಗುವುದಕ್ಕೆ ಹಿಂದೆಯೇ ಒಮ್ಮೆ ನನ್ನ ಅಗ್ರಜ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಅವರನ್ನು ಸ್ಟೇಜ್ ಮೇಲೆ ಕರೆಸಿದ್ದೆ. ಎಂದು ಜಗ್ಗೇಶ್ ಹಳೆ ಘಟನೆಯನ್ನು ಮೆಲುಕು ಹಾಕಿದ್ದಾರೆ.

ರಾಘವೇಂದ್ರ ಸ್ಟೋರ್ಸ್ ಎನ್ನುವುದು ಒಂದು ಪವಾಡ ಎಂದಿರುವ ಜಗ್ಗೇಶ್ ತಮ್ಮ ಮೆಚ್ಚಿನ ಗುರು ರಾಘವೇಂದ್ರ ಸ್ವಾಮಿಗಳ ಹೆಸರೇ ಆ ಸಿನಿಮಾ ಟೈಟಲ್ ಇರುವುದರಿಂದ ಅದುವೇ ತಮಗೆ ಶ್ರೀರಕ್ಷೆ ಎನ್ನುವ ಮಾತುಗಳನ್ನು ಜಗ್ಗೇಶ್ ಆಡಿದ್ದಾರೆ. ಮಂತ್ರಾಲಯಕ್ಕೆ ಭೇಟಿ ನೀಡುವುದರಿಂದ ಒಳ್ಲೆಯದಾಗುತ್ತದೆ ಎಂಬ ಜಗ್ಗೇಶ್ ಮಾತಿನಿಂದ ಪ್ರೇರಣೆ ಪಡೆದು ನಿರ್ದೇಶಕ ಸಂತೋಶ್ ಮಂತ್ರಾಲಯಕ್ಕೆ ತೆರಳಿದ್ದರಂತೆ. ಅಲ್ಲಿ ಅವರಿಗೆ ಈ ಸಿನಿಮಾ ಮಾಡುವ ಯೋಚನೆ ಹೊಳೆದಿದ್ದು ಎಂದು ಜಗ್ಘೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಂತೋಷ್ ಅವರು ಕನ್ನಡ ಪ್ರೇಕ್ಷಕರಿಗೆ ವಿಭಿನ್ನ ನಗೆಯ ಸಿನಿಮಾ ನೀಡಲಿದ್ದಾರೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com