ಟಾಲಿವುಡ್ ನಟ ಅಡಿವಿ ಶೇಷ್ ಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಟಾಲಿವುಡ್‌ ನಟ ಅಡಿವಿ ಶೇಷ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಅವರು ಕಳೆದೊಂದು ವಾರದಿಂದ ಡೆಂಗಿ ಜ್ವರದಿಂದ ಬಳಲುತ್ತಿದ್ದರು.
ಅಡಿವಿ ಶೇಷ್
ಅಡಿವಿ ಶೇಷ್

ಹೈದರಾಬಾದ್‌: ಟಾಲಿವುಡ್‌ ನಟ ಅಡಿವಿ ಶೇಷ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಅವರು ಕಳೆದೊಂದು ವಾರದಿಂದ ಡೆಂಗಿ ಜ್ವರದಿಂದ ಬಳಲುತ್ತಿದ್ದರು.  ಎರಡು ದಿನಗಳ ಹಿಂದೆ ರಕ್ತದ ಪ್ಲೇಟ್‌ಲೆಟ್‌ಗಳ ಹಠಾತ್ ಕುಸಿತದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಅಡಿವಿ ಶೇಷ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಎರಡು-ಮೂರು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದ ’ಮೇಜರ್‌’ ಸಿನಿಮಾದಲ್ಲಿ ಅಡಿವಿ ಶೇಷ್‌ ನಾಯಕ ನಟರಾಗಿ ನಟಿಸಿದ್ದಾರೆ.

26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ ಸಿನಿಮಾವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com