'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿಯ ರಿಲೀಸ್: ಕಾಂಗ್ರೆಸ್‌ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!
ಈ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ವರು ಮತ್ತು ಬುಂದೇಲ್‌ಖಂಡದ ಒಬ್ಬ ಅಭ್ಯರ್ಥಿ ಇದ್ದಾರೆ. ಇದರಲ್ಲಿ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳೂ ಸೇರಿವೆ. ಇವೆರಡೂ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್ ತನ್ನ ಬೇಡಿಕೆಯ ಪಟ್ಟಿಯಲ್ಲಿ ಇವುಗಳನ್ನು ಸೇರಿಸಿತ್ತು.

ಲಕ್ನೋ: ನವದೆಹಲಿಯಲ್ಲಿ ಮೈತ್ರಿ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಮಾತುಕತೆಗಳು ನಡೆಯುತ್ತಿರುವ ನಡುವೆಯೇ, ಸಮಾಜವಾದಿ ಪಕ್ಷವು (ಎಸ್‌ಪಿ) ಮಂಗಳವಾರ ರಾತ್ರಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಐವರು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ವರು ಮತ್ತು ಬುಂದೇಲ್‌ಖಂಡದ ಒಬ್ಬ ಅಭ್ಯರ್ಥಿ ಇದ್ದಾರೆ. ಇದರಲ್ಲಿ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳೂ ಸೇರಿವೆ. ಇವೆರಡೂ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್ ತನ್ನ ಬೇಡಿಕೆಯ ಪಟ್ಟಿಯಲ್ಲಿ ಇವುಗಳನ್ನು ಸೇರಿಸಿತ್ತು.
ಸಮಾಜವಾದಿ ಪಕ್ಷವು ತನ್ನ ಹಾಲಿ ಶಾಸಕರಾದ ಬೆಹತ್‌ನ ಉಮರ್ ಅಲಿ ಖಾನ್, ಸಹರಾನ್‌ಪುರದ ಅಶು ಮಲಿಕ್, ಕೈರಾನಾದ ನಹಿದ್ ಹಸನ್ (ಪಕ್ಷದ ಸಂಸದೆ ಇಕ್ರಾ ಹಸನ್ ಅವರ ಸಹೋದರ) ಮತ್ತು ಅಮ್ರೋಹಾದ ಮೆಹಬೂಬ್ ಅಲಿ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಬುಂದೇಲ್‌ಖಂಡ ಪ್ರದೇಶದಿಂದ ಲಲಿತ್‌ಪುರದ ಜ್ಯೋತಿ ಲೋಧಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಪಕ್ಷದ 'ಪಿಡಿಎ' (ಪಿಚ್‌ಡಾ - ಹಿಂದುಳಿದವರು, ದಲಿತ, ಅಲ್ಪಸಂಖ್ಯಾತ) ಸೂತ್ರಕ್ಕೆ ಅನುಗುಣವಾಗಿ, ಘೋಷಿಸಲಾದ ಐವರು ಅಭ್ಯರ್ಥಿಗಳಲ್ಲಿ ನಾಲ್ವರು ಮುಸ್ಲಿಮರಾಗಿದ್ದಾರೆ, ಹಾಗೂ ಜ್ಯೋತಿ ಲೋಧಿ ಅವರು ಒಬಿಸಿ (OBC) ಸಮುದಾಯಕ್ಕೆ ಸೇರಿದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


