ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ದಸರಾ ಗಿಫ್ಟ್: 'SriKrishna@gmail.com' ಅಕ್ಟೋಬರ್ 14 ರಂದು ತೆರೆಗೆ
ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ನಟನೆಯ ಶ್ರೀಕೃಷ್ಣಅಟ್ ಜಿಮೇಲ್ ಡಾಟ್ ಕಾಮ್ ಸಿನಿಮಾ ದಸರಾ ಸಂಭ್ರಮದಂದು ಅಂದರೆ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ.
Published: 20th September 2021 11:07 AM | Last Updated: 20th September 2021 12:51 PM | A+A A-

ಸಿನಿಮಾ ಸ್ಟಿಲ್
ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ನಟನೆಯ ಶ್ರೀಕೃಷ್ಣಅಟ್ ಜಿಮೇಲ್ ಡಾಟ್ ಕಾಮ್ ಸಿನಿಮಾ ದಸರಾ ಸಂಭ್ರಮದಂದು ಅಂದರೆ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ.
ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾವನ್ನು ಜಯಣ್ಣ ಸಿನಿಮಾ ಹಂಚಿಕೆ ಮಾಡುತ್ತಿದ್ದು, ಕನ್ನಡ ಮತ್ತು ಮಲಯಾಳಂ ನಲ್ಲಿ ರಿಲೀಸ್ ಆಗಲಿದೆ.
ಸರ್ಕಾರ ಶೇ, 50 ರಷ್ಟು ಸೀಟು ಭರ್ತಿ ಗೆ ಅವಕಾಶ ನೀಡಿರುವುದರ ಬೆನ್ನಲ್ಲೇ ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, ಸರ್ಕಾರದ ತೀರ್ಮಾನವನ್ನು ನಾವು ಗೌರವಿಸುತ್ತೇವೆ, ಇದೇ ವೇಳೆ ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದು ನಿರ್ದೇಶಕ ನಾಗಶೇಕರ್ ಹೇಳಿದ್ದಾರೆ.
ಇದನ್ನೂ ಓದಿ: ''ಲವ್ ಮಿ or ಹೇಟ್ ಮಿ'' ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತ
ಆದಷ್ಟು ಶೀಘ್ರವೇ ಚಿತ್ರ ತಂಡ ಸಿನಿಮಾ ಪ್ರಮೋಷನ್ ಆರಂಭಿಸಲಿದೆ. ವಿವಾಹೇತರ ಸಂಬಂಧ ಮತ್ತು ಲಿವ್ ಇನ್ ರಿಲೇಷನ್ ಶಿಪ್ ಗಳ ಬಗ್ಗೆ ಕತೆ ಹೆಣೆಯಲಾಗಿದೆ. ಇದೇ ಮೊದಲ ಬಾರಿಗೆ ಭಾವನಾ ಮತ್ತು ಕೃಷ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡಿದ್ದು ಸತ್ಯ ಹೆಗಡೆ ಛಾಯಾಗ್ರಾಹಣವಿದೆ, ಸಿನಿಮಾದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ.