ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಗೆ ಪ್ರತಿಷ್ಟಿತ ಎಮ್ಮೀ ಅವಾರ್ಡ್

ಮೇರ್ ಆಫ್ ಈಸ್ಟ್ ಟೌನ್ ಧಾರಾವಾಹಿಯಲ್ಲಿ ಕೇಟ್ ವಿನ್ಸ್ಲೆಟ್ ಅವರದು ಪತ್ತೇದಾರಿ ಪಾತ್ರ. ಹಳ್ಳಿಯೊಂದರಲ್ಲಿ ನಡೆಯುವ ಕೊಲೆಯ ತನಿಖೆ ಧಾರಾವಾಹಿ ಕಥಾವಸ್ತು. 
ಕೇಟ್ ವಿನ್ಸ್ಲೆಟ್
ಕೇಟ್ ವಿನ್ಸ್ಲೆಟ್

ಲಾಸ್ ಎಂಜೆಲಿಸ್: ಟೈಟಾನಿಕ್ ಹೀರೋಯಿನ್ ಎಂದೇ ಜಗತ್ಪ್ರಸಿದ್ಧಿ ಹೊಂದಿದ ನಟಿ ಕೇಟ್ ವಿನ್ಸ್ ಲೆಟ್ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಮೇರ್ ಆಫ್ ಈಸ್ಟ್ ಟೌನ್ ಎಂಬ ಧಾರಾವಾಹಿಯಲ್ಲಿನ ನಟನೆಗಾಗಿ ಅವರಿಗೆ ಎಮ್ಮೀ ಪ್ರಶಸ್ತಿ ಸಿಕ್ಕಿದೆ. ಈ ಹಿಂದೆ 2011ರಲ್ಲಿ ಮೈಲ್ಡ್ ರೆಡ್ ಪಿಯರ್ಸ್ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಅವರು ಎಮ್ಮೀ ಪ್ರಶಸಿ ಗೆದ್ದಿದ್ದರು.

ಮೇರ್ ಆಫ್ ಈಸ್ಟ್ ಟೌನ್ ಧಾರಾವಾಹಿಯಲ್ಲಿ ಕೇಟ್ ವಿನ್ಸ್ ಲೆಟ್ ಅವರದು ಪತ್ತೇದಾರಿ ಪಾತ್ರ. ಹಳ್ಳಿಯೊಂದರಲ್ಲಿ ನಡೆಯುವ ಕೊಲೆಯ ತನಿಖೆ ಧಾರಾವಾಹಿ ಕಥಾವಸ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com