ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ
ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.
Published: 05th September 2021 04:52 PM | Last Updated: 06th September 2021 02:09 PM | A+A A-

ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿ -ಸಂಗ್ರಹ ಚಿತ್ರ
ಹಾಲಿವುಡ್: ಹಾಲಿವುಡ್ ನ ಅಗ್ರಗಣ್ಯ ನಟಿಯರಲ್ಲಿ ಒಬ್ಬರಾದ ಆಂಜೆಲಿನಾ ಜೋಲಿ ತಾವು 2016ರಲ್ಲಿ ಬ್ರಾಡ್ ಪಿಟ್ ಅವರಿಗೆ ಡೈವೊರ್ಸ್ ನೀಡಿದ್ದು ಏಕೆಂದು ಈಗ ಬಹಿರಂಗಪಡಿಸಿದ್ದಾರೆ.
ಬ್ರಾಡ್ ಮತ್ತು ಆಂಜೆಲಿನಾ ಜೋಲಿ ಜೋಡಿ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿತ್ತು. ಅವರಿಬ್ಬರೂ ಸೇರಿ ಹಲವು ಮಕ್ಕಳನ್ನು ಜೊತೆಯಾಗಿ ದತ್ತು ತೆಗೆದುಕೊಂಡಿದ್ದರು. ಅಲ್ಲದೆ ದೇಣಿಗೆ ಕಾರ್ಯಕ್ರಮಗಳಲ್ಲಿ ಈ ಜೋಡಿ ಭಾಗವಹಿಸಿ ಹಲವು ಸಾಮಾಜಿಕ ಕಾರ್ಯಗಳಿಗೆ ಹಣ ಸಂಗ್ರಹಿಸಿದ್ದರು.
ಇನ್ನೂ ಓದಿ: 'ಅಮೃತಮತಿ’ಗೆ ಮತ್ತೊಂದು ಗರಿ: ನಟಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ
ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.
2005ರಿಂದಲೂ ಬ್ರಾಡ್ ಮತ್ತು ಆಂಜೆಲಿನಾ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಇದ್ದರು. 2014ರಲ್ಲಿ ಇಬ್ಬರೂ ಮದುವೆಯಾಗಿದ್ದರು.
ಇನ್ನೂ ಓದಿ: ಬೈಕ್ ಭೀಕರ ಅಪಘಾತ: ಹಾಲಿವುಡ್ ನಟ ಕೆವಿನ್ ಕ್ಲಾರ್ಕ್ ನಿಧನ
ಈಗ ಕಳಂಕಿತ ನಿರ್ದೇಶಕ ಹಣೆಪಟ್ಟಿಯನ್ನು ಹೊತ್ತಿರುವ ಹಾರ್ವೆ ವೈನ್ ಸ್ಟೀನ್ ಬ್ರಾಡ್ ಪಿಟ್ ಗೆ ಸಿನಿಮಾ ಅವಕಾಶ ನೀಡಿದ್ದ. ಹಾರ್ವೆ ವೈನ್ ಸ್ಟೀನ್ ಎಂಥಾ ಕಾಮುಕ ಎನ್ನುವುದು ಆಂಜೆಲಿನಾ ಜೋಲಿಗೆ ಗೊತ್ತಿತ್ತು. ಈ ಹಿಂದೆ ಆತನ ಸಿನಿಮಾವನ್ನು ಜೋಲಿ ನಿರಾಕರಿಸಿದ್ದಳು.
ಪತಿ ಬ್ರಾಡ್ ಗೂ ಅವನ ಸಿನಿಮಾ ಮಾಡದಂತೆ ಸಲಹೆ ನೀಡಿದ್ದಳು. ಆದರೆ ಬ್ರಾಡ್ ಆತನ ನಿರ್ಮಾಣದ 'ಇಂಗ್ಲೋರಿಯಸ್ ಬಾಸ್ಟರ್ಡ್ಸ್' ಸಿನಿಮಾದಲ್ಲಿ ನಟಿಸಿದ. ಇದರಿಂದಾಗಿ ಆಂಜೆಲಿನಾ ಮತ್ತು ಬ್ರಾಡ್ ದಂಪತಿ ನಡುವೆ ವಿರಸ ಮೂಡಿತ್ತು ಎನ್ನುವುದು ಇದೀಗ ಬಹಿರಂಗವಾಗಿದೆ.
ಇನ್ನೂ ಓದಿ: 24 ಗಂಟೆಗಳಲ್ಲಿ ಅತ್ಯಧಿಕ ವೀಕ್ಷಕರು ನೋಡಿದ ಟ್ರೇಲರ್ ವಿಶ್ವದಾಖಲೆ: ಅವೆಂಜರ್ಸ್ ಸಿನಿಮಾ ದಾಖಲೆ ಮುರಿದ ಸ್ಪೈಡರ್ ಮ್ಯಾನ್
ಮಿ ಟೂ ಸಂದರ್ಭ ಹಾರ್ವೆ ವೈನ್ ಸ್ಟೀನ್ ವಿರುದ್ಧ ಹಾಲಿವುಡ್ ನ ಅನೇಕ ನಟಿಯರು ಲೈಂಗಿಕ ಕಿರುಕುಳ, ಅತ್ಯಾಚಾರ ದೂರುಗಳನ್ನು ದಾಖಲಿಸಿದ್ದು ಅದರ ವಿಚಾರಣೆ ನಡೆಯುತ್ತಿದೆ. ಆತನನ್ನು ಹಾಲಿವುಡ್ ಬಹಿಷ್ಕರಿಸಿದೆ.