24 ಗಂಟೆಗಳಲ್ಲಿ ಅತ್ಯಧಿಕ ವೀಕ್ಷಕರು ನೋಡಿದ ಟ್ರೇಲರ್ ವಿಶ್ವದಾಖಲೆ: ಅವೆಂಜರ್ಸ್ ಸಿನಿಮಾ ದಾಖಲೆ ಮುರಿದ ಸ್ಪೈಡರ್ ಮ್ಯಾನ್
ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಮಂದಿ ವೀಕ್ಷಿಸಿದ್ದರು.
Published: 26th August 2021 03:48 PM | Last Updated: 26th August 2021 03:48 PM | A+A A-

ಸಿನಿಮಾ ಸ್ಟಿಲ್
ಹಾಲಿವುಡ್: ಸ್ಪೈಡರ್ ಮ್ಯಾನ್ ಚಿತ್ರಸರಣಿಯ ನೂತನ ಸಿನಿಮಾ 'ನೋ ವೇ ಹೋಂ' ಟ್ರೇಲರ್ ಮಂಗಳವಾರವಷ್ಟೇ ಬಿಡುಗಡೆಗೊಂಡಿತ್ತು. 24 ಗಂಟೆಗಳ ಅವಧಿಯಲ್ಲಿ ವಿಶ್ವದಾಖಲೆಯ ಪ್ರಮಾಣದಲ್ಲಿ ವೀಕ್ಷಕರು ಟ್ರೇಲರ್ ನೋಡಿದ್ದಾರೆ.
ಆ ಮೂಲಕ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಮಂದಿ ನೋಡಿದ ಸಿನಿಮಾ ಟ್ರೇಲರ್ ಎನ್ನುವ ಖ್ಯಾತಿಗೆ ಸ್ಪೈಡರ್ ಮ್ಯಾನ್ ಸರಣಿಯ ಈ ನೂತನ ಚಿತ್ರ ಪಾತ್ರವಾಗಿದೆ. ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಮಂದಿ ವೀಕ್ಷಿಸಿದ್ದರು.
ಆದರೆ ಈಗ ಸ್ಪೈಡರ್ ಮ್ಯಾನ್: ನೋ ವೇ ಹೋಂ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 35.5 ಕೋಟಿ ಮಂದಿ ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಇನ್ನೂ ಏರುತ್ತಲೇ ಇದೆ ಎನ್ನುವುದು ಅಚ್ಚರಿಯ ಸಂಗತಿ.
ಸ್ಪೈಡರ್ ಮ್ಯಾನ್ ಪಾತ್ರದಲ್ಲಿ ಟಾಂ ಹಾಲೆಂಡ್ ನಟಿಸಿದ್ದಾರೆ. ಟ್ರೇಲರ್ ನಲ್ಲಿ ಈ ಹಿಂದಿನ ಸ್ಪೈಡರ್ ಮ್ಯಾನ್ ಸಿನಿಮಾಗಳ ವಿಲನ್ ಗಳೂ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲ ತಾರಕಕ್ಕೇರಿದೆ.