The New Indian Express
ಲಂಡನ್: ಜೇಮ್ಸ್ ಬಾಂಡ್ ಸರಣಿಯಲ್ಲಿ ಮೂಡಿಬರುತ್ತಿರುವ ನೂತನ ಸಿನಿಮಾ 'ನೋ ಟೈಂ ಟು ಡೈ' ಸಿನಿಮಾದ ಕೊನೆಯ ದೃಶ್ಯ ಚಿತ್ರೀಕರಣ ವೇಳೆ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ತುಂಬಾ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.. ಅವರು ಜೇಮ್ಸ್ ಬಾಂಡ್ ಪಾತ್ರಧಾರಿಯಾಗಿ ಕಾಣೀಸಿಕೊಳ್ಳಲಿರುವ ಕಡೆಯ ಸಿನಿಮಾ ಇದಾಗಿರಲಿದೆ.
ಇದನ್ನೂ ಓದಿ: ಎರಡು ಸಿನಿಮಾಗಳಿಗೆ 744 ಕೋಟಿ ರೂ. ಸಂಭಾವನೆ ಪಡೆದ ಜೇಮ್ಸ್ ಬಾಂಡ್ ನಟ
ಡೇನಿಯಲ್ ಅವರು ಕೆಸೀನೊ ರಾಯಲ್ ಸಿನಿಮಾದಿಂದ ಜೇಮ್ಸ್ ಬಾಂಡ್ ಸರಣಿಗೆ ಕಾಲಿಟ್ಟಿದ್ದರು. ನಂತರ ಕ್ವಾಂಟಂ ಆಫ್ ಸೊಲೇಸ್, ಸ್ಕೈ ಫಾಲ್ ಹಾಗೂ ಸ್ಪೆಕ್ಟರ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದರು. ಕಳೆದ 15 ವರ್ಷಗಳಿಂದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಗತ್ತಿನ ಕಲಾರಸಿಕರನ್ನು ರಂಜಿಸಿದ್ದರು.
ಕೊನೆಯ ದೃಶ್ಯ ಶೂಟಿಂಗ್ ವೇಳೆ ಕ್ರೇಗ್ ಅವರು ಜಗತ್ತಿನ ಸುಪ್ರಸಿದ್ಧ ಕಾಲ್ಪನಿಕ ಗೂಢಚಾರಿ ಪಾತ್ರವಾದ ಜೇಮ್ಸ್ ಬಾಂಡ್ ಆಗಿ ನಟಿಸಿದ್ದು ತಮ್ಮ ಜೀವನದ ಅತ್ಯುತ್ತಮ ಭಾಗ. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟಿಸಿದ ಪ್ರತಿ ಕ್ಷಣವೂ ನನಗೆ ಬೆಲೆಕಟ್ಟಲಾಗದಷ್ಟು ಅಮೂಲ್ಯವಾದುದು ಎಂದು ಹೇಳಿ ಈ ಪಾತ್ರವನ್ನು ಮಿಸ್ ಮಾಡಿಕೊಳ್ಳುವುದಾಗಿ ಆನಂದ ಭಾಷ್ಪ ಹರಿಸಿದ್ದಾರೆ. ಸೆಟ್ ನಲ್ಲಿದ್ದ ತಂತ್ರಜ್ನರೂ ಬಾಂಡ್ ಅವರ ಅಂತಿಮ ಕ್ಷಣದಲ್ಲಿ ಭಾಗಿಯಾಗಿ ಪರಸ್ಪರ ಆಲಿಂಗಿಸಿಕೊಂಡಿದ್ದಾಗಿ ತಿಳಿದುಬಂದಿದೆ.