ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನಟ ಜಗ್ಗೇಶ್ ರಿಂದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ!
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಇತ್ಯಾರ್ಥಗೊಳಿಸಿರುವ ಪೊಲೀಸರಿಗೆ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
Published: 28th August 2021 08:31 PM | Last Updated: 28th August 2021 08:31 PM | A+A A-

ಜಗ್ಗೇಶ್
ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಇತ್ಯಾರ್ಥಗೊಳಿಸಿರುವ ಪೊಲೀಸರಿಗೆ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, 'ಕಾಲೇಜು ವಿಧ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಕಾಮಪಿಪಾಸುಗಳನ್ನು ಬಂಧಿಸಿದ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ಅಭಿನಂದನೆಗಳು' ಎಂದು ತಿಳಿಸಿದ್ದಾರೆ.
'ನಮ್ಮ ರಾಜ್ಯದ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಕಡೆಯಿಂದ ಪ್ರಕರಣ ಭೇದಿಸಿರುವ ನಲ್ಮೆಯ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ನೀಡಲಿದ್ದೇನೆ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೊಲೀಸ್' ಎಂದು ಅವರು ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.
ಮೈಸೂರಿನ ಅತ್ಯಾಚಾರ ಆರೋಪಿಗಳ ಬಂದಿಸಿದ ಪೋಲಿಸರಿಗೆ ಕಾರ್ಯದಕ್ಷತೆಗೆ ನನ್ನ ವೈಯಕ್ತಿಕ 1ಲಕ್ಷ ರೂ ಗಳ ಹಣದ ಚಕ್ ಗೃಹ ಮಂತ್ರಿಗಳು ಶ್ರೀ ಅರಗಜ್ನಾನೇಂದ್ರ ರಿಗೆ ಒಪ್ಪಿಸಿದೆ..
— ನವರಸನಾಯಕ ಜಗ್ಗೇಶ್ (@Jaggesh2) August 28, 2021
ಮೈಸೂರು ಪೋಲಿಸರಿಗೆ ಇರಲಿ ನಿಮ್ಮ ಬೆಂಬಲ ಪ್ರೋತ್ಸಾಹ..
ನಮ್ಮ ಮನೆಯ ಹೆಣ್ಣಂತೆ ಅಲ್ಲವೆ ಅನ್ಯಮಕ್ಕಳು ಕೂಡ...ಹರಿಃಓಂ pic.twitter.com/d8qLJFIaPw