
ಜಗ್ಗೇಶ್
ಬೆಂಗಳೂರು: ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ಯಾಂಡಲ್ ವುಡ್ ನಟ ಜಗ್ಗೇಶ್ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಎಂಥ ಕ್ರೂರಿಗಳು... ತಾಯಿ ಹೆಣ್ಣಲ್ಲವೇ? ಅಕ್ಕತಂಗಿ ಹೆಣ್ಣಲ್ಲವೇ? ಮಡದಿ ಹೆಣ್ಣಲ್ಲವೇ? ಎಂದು ಪ್ರಶ್ನಿಸಿದ್ದು, ಈ ಕೃತ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು ಎಂದಿದ್ದಾರೆ.
ಎಂಥ ಕ್ರೂರಿಗಳು...
ತಾಯಿ ಹೆಣ್ಣಲ್ಲವೆ?
ಅಕ್ಕತಂಗಿ ಹೆಣ್ಣಲ್ಲವೆ?
ಮಡದಿ ಹೆಣ್ಣಲ್ಲವೆ?
ಹೆಣ್ಣು ಗೌರವಿಸದವರು ರಕ್ಕಸರು!
ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು!
ಈ ಕ್ರೂರ ಕೃತ್ಯಕ್ಕೆ ಕಂಡನೆ.... https://t.co/QVwgY4QAWq— ನವರಸನಾಯಕ ಜಗ್ಗೇಶ್ (@Jaggesh2) August 26, 2021
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಗುಡ್ಡದಲ್ಲಿ ಮಂಗಳವಾರ ರಾತ್ರಿ ಕಾಲೇಜ್ ವಿದ್ಯಾರ್ಥಿನಿಯೊಬ್ಬರ ಮೇಲೆ ಐದು ಮಂದಿ ಗ್ಯಾಂಗ್ ರೇಪ್ ನಡೆಸಿದ್ದು, ಪ್ರಕರಣ ಬುಧವಾರ ಬೆಳಕಿಗೆ ಬಂದಿತ್ತು.