Source : Online Desk
ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜಗತ್ತು ಆತಂಕದಿಂದ ನೋಡಿದೆ. ತಮ್ಮ ದೇಶ ತಾಲಿಬಾನ್ ವಶವಾಗುತ್ತಿದ್ದಂತೆಯೇ ಹಲವು ಮಂದಿ ಇತರೆ ದೇಶಗಳಿಗೆ ಪಲಾಯನ ಮಾಡಿದ್ದರು. ಅವರಲ್ಲಿ ಸಂಗೀತಗಾರರು, ಕಲಾವಿದರೂ ಸೇರಿದ್ದರು.
ಇದನ್ನೂ ಓದಿ: ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ
ಅನಿವಾರ್ಯವಾಗಿ ತಮ್ಮ ದೇಶ ತೊರೆದು ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಆಶ್ರಯ ಪಡೆದಿರುವ ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಫರ್ದಾ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.
ವಿಶ್ವಸಂಸ್ಥೆಯ ಜೊತೆಗಿನ Ricky with Refugee ಎನ್ನುವ ಕಾರ್ಯಕ್ರಮದಡಿ ಈ ಆಲ್ಬಂ ಮೂಡಿಬಂಡಿದೆ. ಈ ಕಾರ್ಯಕ್ರಮದಡಿ ರಿಕಿ ಕೇಜ್ ಅವರು ೨೪ ಮಂದಿ ಆಫ್ಘನ್ ಮತ್ತು ಮ್ಯಾನ್ಮಾರ್ ನಿರಾಶ್ರಿತರೊಂದಿಗೆ ಸೇರಿ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: ರೊಮ್ಯಾಂಟಿಕ್ ಕನ್ನಡ ಮ್ಯೂಸಿಕ್ ಆಲ್ಬಂನಲ್ಲಿ 'ಪದವಿಪೂರ್ವ' ನಟಿ ಯಶ ಶಿವಕುಮಾರ್
ಸಂಗೀತ ಕಲಾವಿದರಾಗಿ ತಾಯ್ನಾಡು ತೊರೆದು ಪರ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಆಫ್ಘನ್ ನಿರಾಶ್ರಿತರಿಗೆ ಸಂಗೀತವೋಮ್ದೇ ಮಾಧ್ಯಮ. ಅವರು ಅದರ ಮೂಲಕವೇ ಸಂವಹನ ನಡೆಸಬೇಕು. ಅದರ ಮೂಲಕವೇ ಹಣ ಸಂಪಾದಿಸಬೇಕು. ಇಂಥಾ ಕಷ್ತಕರ ಸಮಯದಲ್ಲೂ ಅವರು ಸಂಗೀತ ಸಾಮ್ಧನೆ ಮುಂದುವರಿಸಿರುವುದೇ ದೊಡ್ಡ ಸಂಗತಿ ಎಂದು ಕೇಜ್ ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ ಕಿರಣ್ ಸ್ಟುಡಿಯೋದಲ್ಲಿ ದರೋಡೆ, 35 ಲಕ್ಷ ರೂ. ಮೌಲ್ಯದ ಸ್ವತ್ತು ಕಳವು