The New Indian Express
ಬೆಂಗಳೂರು: ನಟರಾಗಿದ್ದ ಧನಂಜಯ್ ನಿರ್ಮಾಪಕ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಹೆಡ್ ಬುಷ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಇದನ್ನೂ ಓದಿ: 'ಹೆಡ್ ಬುಷ್' ನಲ್ಲಿ ಪ್ರೊಫೆಸರ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ!
ಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರು ಹೆಡ್ ಬುಷ್ ಸಿನಿಮಾದ ಪಾತ್ರಗಳನ್ನು ಬ್ರಿಲಿಯೆಂಟ್ ಆಗಿ ಚಿತ್ರಿಸಿದ್ದಾರೆ, ದೊಡ್ಡ ಪರದೆ ಮೇಲೆ ಒಂದೊಂದು ಪಾತ್ರಗಳೂ ಮಿಂಚಲಿವೆ ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ತಂಡಕ್ಕೆ 'ಸಿದ್ಲಿಂಗು' ಖ್ಯಾತಿಯ ಯೋಗಿ ಸೇರ್ಪಡೆ!
ಇದುವರೆಗೂ 40 ದಿನಗಳ ಶೂಟ್ ಮುಗಿಸಿದ್ದು, ಇನ್ನೂ 60- 70 ದಿನಗಳ ಶೂಟ್ ಬಾಕಿಯಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ.
ಹೆಡ್ ಬುಷ್ ಸಿನಿಮಾವನ್ನು ಶೂನ್ಯ ಅವರು ನಿರ್ದೇಶಿಸಿದ್ದಾರೆ. ಧನಂಜಯ್, ಪಾಯಲ್ ರಜಪೂತ್, ಯೋಗಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ರಘು ಮುಖರ್ಜಿ ಮತ್ತು ಬಾಲು ನಾಗೇಂದ್ರ ಅವರು ತಾರಾಗಣದಲ್ಲಿದ್ದಾರೆ.
ಬೆಂಗಳೂರಿನ ಮೊದಲ ಅಂಡರ್ ವರ್ಲ್ಡ್ ಡಾನ್ ಎಂದು ಹೆಸರಾದ ಎಂ.ಪಿ ಜಯರಾಜ್ ಕುರಿತಾದ ಈ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹಿರಿದಾಗುತ್ತಿದೆ ಧನಂಜಯ್ ಬಳಗ: ಡಾಲಿಯ 'ಹೆಡ್ ಬುಷ್' ತಂಡ ರಘು ಮುಖರ್ಜಿ ಸೇರ್ಪಡೆ!