ರವಿಚಂದ್ರನ್ ನನ್ನ ಅತ್ಯುತ್ತಮ ಸಹ ನಟರಲ್ಲಿ ಒಬ್ಬರು: ನವ್ಯ ನಾಯರ್

2014ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಿತ್ರ 'ದೃಶ್ಯ'ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನವ್ಯ ನಾಯರ್, ಆರು ವರ್ಷಗಳ ನಂತರ 'ದೃಶ್ಯ 2' ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಇದೇ ಶುಕ್ರವಾರ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಹಿನ್ವೆಲೆಯಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ನವ್ಯ ನಾಯರ್, ಸಿಕ್ವೆಲ್ ಗೆ ವಾಪಸ್ಸಾದ ಬಗ್ಗೆ ಮಾತನಾಡಿದ್ದಾರೆ. 
ದೃಶ್ಯ 2 ಚಿತ್ರದ ತುಣುಕು
ದೃಶ್ಯ 2 ಚಿತ್ರದ ತುಣುಕು
Updated on

ಬೆಂಗಳೂರು:  2014ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ಚಿತ್ರ 'ದೃಶ್ಯ'ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನವ್ಯ ನಾಯರ್, ಆರು ವರ್ಷಗಳ ನಂತರ 'ದೃಶ್ಯ 2' ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಇದೇ ಶುಕ್ರವಾರ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಹಿನ್ವೆಲೆಯಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ನವ್ಯ ನಾಯರ್, ಸಿಕ್ವೆಲ್ ಗೆ ವಾಪಸ್ಸಾದ ಬಗ್ಗೆ ಮಾತನಾಡಿದ್ದಾರೆ. 

''ದೃಶ್ಯ ಒಂದರಿಂದ ದೃಶ್ಯ 2 ರವರೆಗೆ ನಾವೆಲ್ಲ ಸ್ವಲ್ಪ ಬೆಳೆದಿದ್ದೇವೆ, ಆದರೆ, ನಮ್ಮಲ್ಲಿ ಅಂತಹ ದೊಡ್ಡ ಬದಲಾವಣೆ ಏನೂ ಇಲ್ಲ. ದೃಶ್ಯ 2ರ ಸೆಟ್ ನಲ್ಲಿ ಅಪಾರ ಒಳ್ಳೆಯ ಅನುಭವಗಳಾಗಿದೆ. ರವಿ ಸರ್, ಪಿ. ವಾಸು ಹಾಗೂ ಚಿತ್ರತಂಡ ಅಂತಹ ವಾತಾವರಣ ನಿರ್ಮಿಸಿತ್ತು. ನಾವೆಲ್ಲ ಒಂದು ಕುಟುಂಬದಂತೆ ಇದ್ದೇವು. ಇದು ಎಲ್ಲಾ ಸಿನಿಮಾಗಳಲ್ಲಿಯೂ ಆಗಲ್ಲ. ವೃತ್ತಿಪರ ಕಲಾವಿದರಾಗಿ ಚಿತ್ರೀಕರಣ ಮುಗಿಸಿ, ನಾವು ವಾಪಸ್ಸಾಗುತ್ತೇವೆ, ನಮ್ಮದೇ ಪ್ರಪಂಚದಲ್ಲಿರುತ್ತೇವೆ, ಆದರೆ, ಇಲ್ಲಿ ನಾವು ಪ್ರತಿನಿತ್ಯ ಸಂಪರ್ಕದಲ್ಲಿ ಇಲ್ಲದಿದ್ದರೂ ನಾವೆಲ್ಲ ಒಟ್ಟಾಗಿ ಸೇರಿದಾಗ ನಮ್ಮ ಬಾಂಧವ್ಯ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಿದರು.

ಥಿಯೇಟರ್ ನಲ್ಲಿ ದೃಶ್ಯ 2 ವೀಕ್ಷಿಸಲು ಕಾತುರರಿಂದ ಕಾಯುತ್ತಿರುವ ನವ್ಯ ನಾಯರ್ ಗೆ, ರವಿಚಂದ್ರನ್ ಅತ್ಯುತ್ತಮ ಸಹ ನಟರಲ್ಲಿ ಒಬ್ಬರಂತೆ, ಮೊದಲಿಗೆ, ಅಭಿನಯಿಸಲು ಪೂರ್ಣ ಸ್ವಾತಂತ್ರ್ಯ ನೀಡುತ್ತಾರಂತೆ, ಭಾಷೆ ಅಡತೆಡೆ ಇದ್ದರೂ, ನನ್ನ ಕಣ್ಣುಗಳಲ್ಲಿ ಎಲ್ಲವನ್ನು ವ್ಯಕ್ತಪಡಿಸುವುದಾಗಿ ಅವರು ಯಾವಾಗಲೂ ಹೇಳುತ್ತಿರುತ್ತಾರೆ. ಅದು ಆತ್ಮಸೈರ್ಯ ಮೂಡಿಸುತ್ತದೆ. ಅವರ ವರ್ತನೆಯಿಂದ ಅತ್ಯಂತ ನಿಕಟವರ್ತಿ ಅನಿಸುತ್ತದೆ. ಬೆಂಗಳೂರಿಗೆ ಬಂದಾಗಲೆಲ್ಲಾ, ರವಿಚಂದ್ರನ್ ಅವರ ಮನೆಗೆ ಭೇಟಿ ನೀಡುತ್ತೇನೆ. ಅವರ ಹೆಂಡತಿ ತಯಾರಿಸುವ ಇಡ್ಲಿ, ಸಾಂಬಾರ್ ಸೇವಿಸುತ್ತೇವೆ, ನಟನೆಯಲ್ಲಿ ನನಗೆ ಯಾವುದೇ ಅಡ್ಡಿಯಿಲ್ಲ, ಆದರೆ, ನಾನು ಯಾರೊಂದಿಗಾದರೂ ಕ್ಲೋಸ್ ಆದರೆ, ಏನನ್ನಾದರೂ ಮಾಡಲು ಪ್ರಪಂಚವನ್ನೇ ಮರೆಯುವುದಾಗಿ  ದೃಶ್ಯ 2 ನಲ್ಲಿ ಗೃಹಿಣಿಯಾಗಿ ಅಭಿನಯಿಸಿರುವ ನವ್ಯ ನಾಯರ್ ತಿಳಿಸಿದರು. 

ಮದುವೆಯಾದಾಗಿನಿಂದ ಪಾತ್ರ ಆಯ್ಕೆ ಕಠಿಣವಾಗಿದೆ. ನನ್ನ ಜೀವನದಲ್ಲಿ  ನಟನೆ ಮತ್ತು ಡ್ಯಾನ್ಸಿಂಗ್ ಮಾತ್ರ ಗೊತ್ತು. ಉತ್ತಮ ಚಿತ್ರಗಳೊಂದಿಗೆ ಅವುಗಳನ್ನು ಮುಂದುವರೆಸುತ್ತೇನೆ ಮತ್ತು ನನ್ನ ಕುಟುಂಬಕ್ಕೂ ಅಷ್ಟೇ ಸಮಾನವಾದ ಗಮನ ನೀಡುವುದಾಗಿ ಹೇಳುವ ನವ್ಯ ನಾಯರ್ ಗೆ ಐತಿಹಾಸಿಕ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಂತೆ, ಐತಿಹಾಸಿಕ ಪಾತ್ರಗಳು ನನಗೆ ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ. ವಿಕೆ ಪ್ರಕಾಶ್ ಅವರ ಮುಂದಿನ ಮಲಯಾಳಂ ಚಿತ್ರದಲ್ಲಿ ನವ್ಯ ನಾಯರ್ ನಟಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com