'ಬಡವ ರಾಸ್ಕಲ್' ಪ್ರಾಮಾಣಿಕ ಪ್ರಯತ್ನವಾಗಿದೆ: ನಟ, ನಿರ್ಮಾಪಕ ಧನಂಜಯ್

ರಂಗಭೂಮಿ ಕಲಾವಿದನಾಗಿ  ಜಯನಗರ 4th ಬ್ಲಾಕ್ ಕಿರುಚಿತ್ರದ ಮೂಲಕ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ಧನಂಜಯ್, ಡೈರೆಕ್ಟರ್ ಸ್ಪೆಷಲ್ ಚಿತ್ರದೊಂದಿಗೆ ಬೆಳ್ಳಿ ತೆರೆ ಪ್ರವೇಶದೊಂದಿಗೆ  ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ಬಹುಮುಖ ಪ್ರತಿಭೆಯ ಹೀರೋ ಆಗಿ ಮಿಂಚುತ್ತಿದ್ದಾರೆ. 
ಬಡವ ರಾಸ್ಕಲ್ ಚಿತ್ರದ ತುಣುಕು
ಬಡವ ರಾಸ್ಕಲ್ ಚಿತ್ರದ ತುಣುಕು

ರಂಗಭೂಮಿ ಕಲಾವಿದನಾಗಿ  ಜಯನಗರ 4th ಬ್ಲಾಕ್ ಕಿರುಚಿತ್ರದ ಮೂಲಕ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ಧನಂಜಯ್, ಡೈರೆಕ್ಟರ್ ಸ್ಪೆಷಲ್ ಚಿತ್ರದೊಂದಿಗೆ ಬೆಳ್ಳಿ ತೆರೆ ಪ್ರವೇಶದೊಂದಿಗೆ  ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ಬಹುಮುಖ ಪ್ರತಿಭೆಯ ಹೀರೋ ಆಗಿ ಮಿಂಚುತ್ತಿದ್ದಾರೆ. 

ಟಗರು ಚಿತ್ರದಲ್ಲಿನ 'ವಿಲನ್ ಪಾತ್ರ ಅವರ ವೃತ್ತಿಜೀವನದಲ್ಲಿ ಬಹು ದೊಡ್ಡ ತಿರುವು ನೀಡಿತು. ಇದೀಗ ಏಕಕಾಲದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಹೊಸ ಹಂತ ತಲುಪಿದ್ದಾರೆ. ಗೀತೆ ರಚನೆಯನ್ನು ಪ್ಯಾಶನ್ ಆಗಿ ತೆಗೆದುಕೊಂಡಿರುವ ಧನಂಜಯ್ ಅವರ ರತ್ ನನ್ ಪ್ರಚಂಚ ಇತ್ತೀಚಿಗೆ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. 

<strong>ನಟ ಧನಂಜಯ್</strong>
ನಟ ಧನಂಜಯ್

ಇದೀಗ ಬಡವ ರಾಸ್ಕಲ್ ಸಿನಿಮಾದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಸಿನಿಮಾದ ಹೊಸ ವಿಭಾಗ ಅನ್ವೇಷಣೆಗೆ ಇದು ಅತ್ಯುತ್ತಮ ಸಂತೋಷ ನೀಡಿತು, ನನಗೆ ಅದು ಆಸಕ್ತಿದಾಯಕವಾಗಿದೆ. ಮತ್ತೆ ಅದೇ ಕೆಲಸ ಮಾಡುವುದು ನನಗೆ ಬೇಸರ ತರಿಸುತ್ತದೆ. ನಾನು ಈ ಹೊಸ ಜವಾಬ್ದಾರಿ ಮತ್ತು ಒತ್ತಡವನ್ನು ನಿಭಾಯಿಸಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.

ಸಿನಿಮಾ ನಿರ್ಮಾಣ ಕುರಿತಂತೆ ಪ್ರತಿಕ್ರಿಯಿಸಿದ ಧನಂಜಯ್,  ಸಾಮಾನ್ಯವಾಗಿ ಒಬ್ಬ ನಟ ಇತರರ ಕನಸಿಗಾಗಿ ಕೆಲಸ ಮಾಡುವಾಗ, ನಾವು ಅವರ ಮೇಲೆ ಅವಲಂಬಿತರಾಗಿದ್ದೇವೆ. ನಾವು ಎಲ್ಲಿ ಹೊಂದಿಕೊಳ್ಳುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿದ್ದರೆ, ನಮ್ಮ ಆಸಕ್ತಿಗೆ ತಕ್ಕಂತೆ ಸಿನಿಮಾ ಮಾಡದಿದ್ದರೆ, ಕೆಟ್ಟ ಸಿನಿಮಾದ ಭಾಗವಾಗುತ್ತೇವೆ. 

ಅನೇಕ ಬಾರಿ, ನಾವು ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ. ಸಂಭಾವನೆ ಪಡೆಯುವುದು ಸ್ವತಃ ಸಮಸ್ಯೆಯಾಗಿದೆ. ಈ ವಿಷಯಗಳು ನನ್ನನ್ನು ನಿರ್ಮಾಣಕ್ಕೆ ಧುಮುಕುವಂತೆ ಮಾಡಿತು. ನಮ್ಮ ಡಾಲಿ ಪಿಕ್ಚರ್ಸ್ ಮೂಲಕ ಬಡವ ರಾಸ್ಕಲ್ ಪ್ರಾಮಾಣಿಕ ಪ್ರಯತ್ನವಾಗಿದೆ ಮತ್ತು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸದ ನುಡಿಗಳನ್ನಾಡಿದರು. 

ಬಹಳ ದಿನಗಳಿಂದ ಬಲ್ಲ ನಿರ್ದೇಶಕ ಶಂಕರ್ ಗುರು, ಪಾತ್ರದಾರಿ ಆಯ್ಕೆ ಮಾಡುವಲ್ಲಿ ನೆರವಾಗಿದ್ದಾರೆ. ನಟರು ಹಾಗೂ ತಂತ್ರಜ್ಞರಾದ ಅಮೃತಾ ಅಯ್ಯಂಗರ್, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ಸಂಗೀತ ನಿರ್ದೇಶಕ ವಾಸುಕಿ ವೈಭವ್, ಸಿನಿಮಾಟೋಗ್ರಾಫರ್ , ಪ್ರಿತಾ ಜಯರಾಮ್ ಎಲ್ಲರೂ ನನ್ನ ಉತ್ತಮ ಗೆಳೆಯರಾಗಿದ್ದಾರೆ. ಬಡವ ರಾಸ್ಕಲ್ ನಮ್ಮೆಲ್ಲರನ್ನೂ ಒಟ್ಟಿಗೆ ತಂದಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಬಡವ ರಾಸ್ಕಲ್ ರೋಮ್ಯಾಂಟಿಕ್, ಕಾಮಿಡಿ ಪ್ರೇಕ್ಷಕರಿಗೆ ಇಷ್ಟವಾಗಲಿದ್ದು, ರಂಗಾಯಣ ರಘು ಅವರ ಪಾತ್ರವೂ ಮಹತ್ವದ್ದಾಗಿದೆ. ಕೆಆರ್ ಜಿ ಸ್ಟೋಡಿಯೊ ಮೂಲಕ ಚಿತ್ರ ವಿತರಣೆಯಾಗುತ್ತಿದ್ದು, ಡಿಸೆಂಬರ್ 24 ರಂದು ಬಿಡುಗಡೆಯಾಗಲಿದೆ. 

ಚಿತ್ರವು U/A ಯೊಂದಿಗೆ ಸೆನ್ಸಾರ್ ಆಗಿದೆ ಮತ್ತು  ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸುವಂತೆ ಚಿತ್ರ ಮಾಡಲಾಗಿದೆ. ಪ್ರತಿಯೊಂದು ಪಾತ್ರವೂ ಸಂಬಂಧಿತವಾಗಿರುತ್ತದೆ ಎಂದು ಧನಂಜಯ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com