ರೈಡರ್ ನನ್ನ ಹೃದಯಕ್ಕೆ ಹತ್ತಿರವಾದ ಪ್ರೇಮ ಕಥನ; ನನ್ನ ಹೆಂಡತಿಯೇ ನನ್ನ ಮೊದಲ ವಿಮರ್ಶಕಿ: ನಿಖಿಲ್ ಕುಮಾರಸ್ವಾಮಿ

ಡಿಸೆಂಬರ್ 24 ರಂದು ರೈಡರ್ ಸಿನಿಮಾ ರಿಲೀಸ್ ಆಗುತ್ತಿದೆ, ಈ ಹಿನ್ನೆಲೆಯಲ್ಲಿ ನಟ  ನಿಖಿಲ್ ಕುಮಾರಸ್ವಾಮಿ ಸಿನಿಮಾ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ರೈಡರ್ ಸಿನಿಮಾ ಸ್ಚಿಲ್
ರೈಡರ್ ಸಿನಿಮಾ ಸ್ಚಿಲ್
Updated on

ರೈಡರ್ ಸಿನಿಮಾ ಪಾತ್ರ ನನ್ನ ಹೃದಯಕ್ಕೆ ಹತ್ತಿರವಾದಂತದ್ದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಡಿಸೆಂಬರ್ 24 ರಂದು ರೈಡರ್ ಸಿನಿಮಾ ರಿಲೀಸ್ ಆಗುತ್ತಿದೆ, ಈ ಹಿನ್ನೆಲೆಯಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಿನಿಮಾ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರೈಡರ್ ಸಿನಿಮಾದಲ್ಲಿ ಉತ್ತಮವಾದ ಪಾತ್ರ ನಿರ್ವಹಿಸಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಟ್ರೇಲರ್ ಮತ್ತು ಹಾಡುಗಳಿಗೆ ಸಿಕ್ಕ ಪ್ರತಿಕ್ರಿಯೆಯಿಂದ ನಾನು ಸಂತೋಷವಾಗಿದ್ದೇನೆ, ಕೋವಿಡ್ ಬಂದಿದ್ದು ದುರಾದೃಷ್ಟಕರ, ಆದರೆ ಈ ಸಮಯದಲ್ಲಿ ಒಟಿಟಿ ಜನರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿತು. ರೈಡರ್ ಸಿನಿಮಾ ಮತ್ತೆ ಪ್ರೇಕ್ಷಕರನ್ನು ಥಿಯೇಟರ್ ಗ ಕರೆ ತರಲಿದೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳ ಹೊರತಾಗಿ ಭಾವನಾತ್ಮಕ ಸಂಬಂಧಗಳ ಕಂಟೆಂಟ್ ಇದೆ.

<strong>ನಿಖಿಲ್ ಕುಮಾರಸ್ವಾಮಿ</strong>
ನಿಖಿಲ್ ಕುಮಾರಸ್ವಾಮಿ

ನಿರ್ಮಾಪಕ ಚಂದ್ರು ಮನೋಹರನ್ ಅವರ ಲಹರಿ ಫಿಲ್ಮ್ಸ್ ಮತ್ತು ಸುನೀಲ್ ಗೌಡ ಅವರ ಶಿವನಂದಿ ಎಂಟರ್ಟೈನ್ಮೆಂಟ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಸಿನಿಮಾವನ್ನು, ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ.

ತೆಲುಗಿನಲ್ಲಿ ಎರಡು ಯಶಸ್ವಿ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕರು ಕನ್ನಡದಲ್ಲಿ ತಮ್ಮ ಚೊಚ್ಚಲ ಸಿನಿಮಾಗೆ ಸ್ಥಳೀಯ ಪರಿಮಳ ನೀಡಿದ್ದಾರೆ. ಶರತ್ ಬರೆದ ಕಥೆಯನ್ನು ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ. ಅವರು ಕನ್ನಡದ ಉದ್ಯಮ ಮತ್ತು ಭಾಷೆಯ ಬಗ್ಗೆ ಸಾಕಷ್ಟು ಗೌರವವನ್ನು ಹೊಂದಿದ್ದು ವೃತ್ತಿಪರವಾಗಿ ಅವರು ಸಿನಿಮಾವನ್ನು ನಿಭಾಯಿಸಿದ ರೀತಿ ಇಷ್ಟವಾಯಿತು ಎಂದು ನಿಖಿಲ್ ಹೇಳಿದ್ದಾರೆ.

ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಮಂಜು ಪಾವಗಡ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಮತ್ತು ರಾಮ್ ಗಡೂರ ಸೇರಿದಂತೆ ಬಹುದೊಡ್ಡ ತಾರಾಗಣವಿದೆ, ಆದರೆ ಕಥೆಯ ಹೆಚ್ಚಿನ ಭಾಗ ನಾಯಕ ಮತ್ತು ನಾಯಕಿಯ ಸುತ್ತ ಸುತ್ತುತ್ತದೆ.

ಕಶ್ಮೀರಾ ಪರ್ದೇಸಿ ಅವರ ಚೊಚ್ಚಲ ಕನ್ನಡ ಚಿತ್ರವಾಗಿದ್ದು ರೈಡರ್ ಪಾತ್ರಕ್ಕೆ ಸೂಕ್ತ ನಾಯಕಿಯಾಗಿದ್ದಾರೆ.  ನಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಕೆಲಸ ಮಾಡಿದೆ.

ನಿಖಿಲ್ ತಂದೆ ಕುಮಾರಸ್ವಾಮಿ ರಾಜಕಾರಣಿ ಜೊತೆಗೆ ಚಿತ್ರ ವಿತರಕರೂ ಹೌದು,  ಹೀಗಿದ್ದರೂ ನಿಖಿಲ್ ಪತ್ನಿ ರೇವತಿ ಮೊದಲ ವಿಮರ್ಶಕಿಯಂತೆ,  ನನ್ನ ಜೀವನದ ಪ್ರತಿ ಹಂತದಲ್ಲೂ ಈ ಸಿನಿಮಾ ಪಯಣದಲ್ಲೂ ರೇವತಿ ಇದ್ದಾರೆ. ನಾನು ರೇವತಿಗೆ ಎಡಿಟ್ ಮಾಡದ ವರ್ಸನ್ ತೋರಿಸಿದೆ, ಅದು ನಾಲ್ಕು ಗಂಟೆಗಳ ಕಾಲ ಇತ್ತು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.

ಮಂಜು ಅತಾವರ ಮುಂದಿನ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾರೆ, ಜನವರಿ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ,  ನಾನು ಕಲಾವಿದನಾಗಿ ಬೆಳೆಯಲು ಬಯಸುತ್ತೇನೆ, ಹಾಗಿಲ್ಲದಿದ್ದರೇ ಮುಂದಿನ ಸಿನಿಮಾಗೆ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com