ರೈಡರ್ ನಾಯಕ ನಿಖಿಲ್ ಕುಮಾರಸ್ವಾಮಿ ಓರ್ವ ಜೆಂಟಲ್ ಮ್ಯಾನ್: ಚಿತ್ರತಂಡದ ಕುರಿತು ನಾಯಕಿ ಕಶ್ಮೀರಾ ಪ್ರಶಂಸೆ

ನಿಖಿಲ್ ಕುಮಾರಸ್ವಾಮಿ ನಾಯಕತ್ವದ ರೊಮ್ಯಾಂಟಿಕ್ ಎಂಟರ್ಟೇನರ್ ಸಿನಿಮಾ ರೈಡರ್, ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮೂಡಿಬಂದಿದ್ದು ಡಿಸೆಂಬರ್ 24ರಂದು ತೆರೆಕಾಣುತ್ತಿದೆ. 
ನಟಿ ಕಶ್ಮೀರಾ ಪರ್ದೇಶಿ
ನಟಿ ಕಶ್ಮೀರಾ ಪರ್ದೇಶಿ

ಬೆಂಗಳೂರು: ತೆಲುಗು, ಮರಾಠಿ, ಹಿಂದಿ ಮತ್ತು ತಮಿಳು ಸೇರಿದಂತೆ ಒಟ್ಟು ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕಶ್ಮೀರಾ ಪರ್ದೇಶಿ, ನಿಖಿಲ್ ಕುಮಾರಸ್ವಾಮಿ ನಾಯಕತ್ವದ 'ರೈಡರ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. 

<strong>ಕಶ್ಮೀರಾ</strong>
ಕಶ್ಮೀರಾ

ಸ್ಯಾಂಡಲ್ ವುಡ್ ಪ್ರವೇಶ ಕುರಿತು ಮಾತನಾಡಿರುವ ಕಶ್ಮೀರಾ, ರೈಡರ್ ಚಿತ್ರತಂಡ ತಮ್ಮನ್ನು ಆದರಣೀಯವಾಗಿ ಸ್ವಾಗತಿಸಿದ್ದಲ್ಲದೆ ಎಲ್ಲಾ ಬಗೆಯ ಪ್ರೋತ್ಸಾಹ ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ರೊಮ್ಯಾಂಟಿಕ್ ಎಂಟರ್ಟೇನರ್ ಸಿನಿಮಾ ರೈಡರ್, ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮೂಡಿಬಂದಿದ್ದು ಡಿಸೆಂಬರ್ 24ರಂದು ತೆರೆಕಾಣುತ್ತಿದೆ. 

ಲಹರಿ ಫಿಲಂಸ್ ಮತು ಶಿವನಂದಿ ಎಂಟರ್ಟೇನ್ಮೆಂಟ್ಸ್ ಸಂಸ್ಥೆಗಳು ರೈಡರ್ ಸಿನಿಮಾ ನಿರ್ಮಾಣ ಮಾಡಿವೆ. ನಾಯಕ ನಟ ನಿಖಿಲ್ ಅವರನ್ನು ಜೆಂಟಲ್ ಮೆನ್ ಎಂದು ಹೊಗಳಿರುವ ನಟಿ ಕಶ್ಮೀರಾ, ರೈಡರ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ, ಸಿನಿಮೆಟೊಗ್ರಾಫರ್ ಶ್ರೀಶ ಕುಡುವಳ್ಳಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com