ಲವ್ ಮಾಕ್ಟೇಲ್-2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ಡಾರ್ಲಿಂಗ್ ಕೃಷ್ಣ ಗೆ ಬ್ರೇಕ್ ನೀಡಿದ್ದ ಪಾರ್ಟ್ 1

ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಿರ್ಮಿಸಿದ್ದು, ಮುಖ್ಯ ಪಾತ್ರದಲ್ಲಿ ಕೃಷ್ಣ ಅವರಿಗೆ ನಟಿ ರೇಚೆಲ್ ಡೇವಿಡ್ ಸಾಥ್ ನೀಡಿದ್ದಾರೆ. 
ಸಿನಿಮಾ ಪೋಸ್ಟರ್
ಸಿನಿಮಾ ಪೋಸ್ಟರ್
Updated on

ಬಹುನಿರೀಕ್ಷಿತ ಲವ್ ಮಾಕ್ಟೇಲ್ ಸಿನಿಮಾದ ಎರಡನೇ ಅವತರಣಿಕೆ ಫೆಬ್ರವರಿ 11ರಂದು ಬಿಡುಗಡೆ ಕಾಣಲಿದೆ. ಈ ಬಗ್ಗೆ ನಟ ನಿರ್ದೇಶಕ ಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಸೂರೆಗೊಂಡು ಬಾಕ್ಸಾಫೀಸಿನಲ್ಲಿ ಹಿಟ್ ಆಗಿತ್ತು.. ಇಬ್ಬರು ಪ್ರೇಮಿಗಳ ನವಿರಾದ ಕಥೆಯನ್ನು ಚಿತ್ರ ಒಳಗೊಂಡಿತ್ತು.

2019ರಲ್ಲಿ ತೆರೆಕಂಡಿದ್ದ ಲವ್ ಮಾಕ್ಟೇಲ್ ಸಿನಿಮಾ ಮೂಲಕ ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು ಎನ್ನುವುದು ವಿಶೇಷ. ಅ ಸಿನಿಮಾ ತೆಲುಗಿಗೆ ರೀಮೇಕ್ ಆಗಿತ್ತು. ಸತ್ಯದೇವ್ ಮತ್ತು ತಮನ್ನಾ ಭಾಟಿಯಾ, ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಿರ್ವಹಿಸಿದ್ದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 

ಲವ್ ಮಾಕ್ಟೇಲ್ ಸಿನಿಮಾ ನಂತರ ಚಿತ್ರರಂಗದಲ್ಲಿ ಬಿಜಿಯಾಗಿದ್ದ ಕೃಷ್ಣ ಅವರ ಖಾತೆಯಲ್ಲಿ 6ಕ್ಕೂ ಹೆಚ್ಚು ಸಿನಿಮಾ ಅವಕಾಶಗಳಿವೆ. ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಿರ್ಮಿಸಿದ್ದು, ಮುಖ್ಯ ಪಾತ್ರದಲ್ಲಿ ಕೃಷ್ಣ ಅವರಿಗೆ ನಟಿ ರೇಚೆಲ್ ಡೇವಿಡ್ ಸಾಥ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com