
ರೇಡಿಯೋ-ಜಾಕಿಯಾಗಿ ಬದಲಾಗಿರುವ ನಟ ಶ್ರೀನಿ, ನಿರ್ದೇಶಕ ಪ್ರಶಾಂತ್ ಸಾಗರ್ ಅವರ ಮುಂಬರುವ ಚಿತ್ರದಲ್ಲಿ ರೇಡಿಯೋ ಜಾಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬರುತ್ತಿದೆ.
ಪ್ರಶಾಂತ್ ಅವರು ಬಾಹುಬಲಿ ಮತ್ತು ಆರ್ ಆರ್ ಆರ್ ಸಿನಿಮಾ ಬರಹಗಾರ ವಿಜಯೇಂದ್ರ ಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದರು.
ಪ್ರಶಾಂತ್ ಅವರು ಬರೆದಿದ್ದ ಮಾದ ಸಿನಿಮಾ ಕಥೆಯು ಪ್ರಪಂಚದಾದ್ಯಂತದ ವಿವಿಧ ಅಂತರರಾಷ್ಟ್ರೀಯ ಉತ್ಸವಗಳಲ್ಲಿ 48 ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಕೇನ್ಸ್ ಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡಿತ್ತು. ಓಲ್ಡ್ ಮಾಂಕ್ ಸಿನಿಮಾದಲ್ಲಿ ನಟಿಸಿರುವ ಶ್ರೀನಿ ನಿರ್ದೇಶಕ ಕೂಡ ಹೌದು. ಫೆಬ್ರವರಿಯಲ್ಲಿ ಸಿವಿಮಾ ರಿಲೀಸ್ ಆಗಲಿದೆ.
ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ಆರ್ ಜೆ ಪಾತ್ರ ಮಾಡಲು ಎಕ್ಸೈಟ್ ಆಗಿದ್ದೇನೆ, ಸಿನಿಮಾದಲ್ಲಿ ಕೆಲವೇ ಕೆಲವು ಕಲಾವಿದರಿದ್ದಾರೆ, ಕಥೆಗೆ ನಾಯಕಿಯ ಅಗತ್ಯವಿಲ್ಲ, ಇದೊಂದು ಪ್ರಯೋಗಾತ್ಮಕ ಸಿನಿಮಾವಾಗಿದ್ದು, 30-35 ದಿನಗಳ ಶೆಡ್ಯೂಲ್ ನಲ್ಲಿಚಿತ್ರೀಕರಣ ಮುಗಿಯಲಿದೆ.
Advertisement