ನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೇ ಮುನ್ನಡೆದಿದ್ದೇನೆ: ನಟಿ ಅದಿತಿ ಪ್ರಭುದೇವ
ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ದಾರಿ ಆಯ್ದುಕೊಂಡಿರುವ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವಾ, ಮಹಿಳಾ ಕೇಂದ್ರಿತ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ ಮತ್ತು ಕಥೆ ಆಧಾರಿತ ಚಿತ್ರವನ್ನು ಬಯಸುತ್ತಿದ್ದಾರೆ.
Published: 17th December 2021 01:04 PM | Last Updated: 17th December 2021 04:14 PM | A+A A-

ಅದಿತಿ ಪ್ರಭುದೇವ
ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ದಾರಿ ಆಯ್ದುಕೊಂಡಿರುವ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ, ಮಹಿಳಾ ಕೇಂದ್ರಿತ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ ಮತ್ತು ಕಥೆ ಆಧಾರಿತ ಚಿತ್ರವನ್ನು ಬಯಸುತ್ತಿದ್ದಾರೆ. ರಂಗನಾಯಕಿ ನಟಿಯ ಮುಂದಿನ ಚಿತ್ರ 'ಆನಾ'. ಮನೋಜ್ ಪಿ ನಂದಲುಮಾನೆ ನಿರ್ದೇಶನದ ಈ ಚಿತ್ರ ಹಾರರ್ ಹಾಗೂ ಫ್ಯಾಂಟಸಿ ಕಥೆ ಹೊಂದಿದೆ. ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ, ಕಿರುತೆರೆಯಲ್ಲಿ ಪ್ರಸಿದ್ಧಿಯಾದ ನಂತರ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದಾಗಿ ಆದಿತಿ ಪ್ರಭುದೇವ ಹೇಳಿದ್ದಾರೆ.

ವಿಭಿನ್ನ ಪಾತ್ರಗಳೊಂದಿಗೆ ಅನೇಕ ನಿರ್ದೇಶಕರು ತಮ್ಮನ್ನು ಸಂಪರ್ಕಿಸಿದ್ದಾರೆ. ಹೀರೋಯಿನ್ ಆಗಿ, ಕೇವಲ ಕ್ಯೂಟ್ ಅಥವಾ ಬ್ಯೂಟಿಫುಲ್ ಆಗಿ ಮಾತ್ರ ಕಾಣಿಸಿಕೊಳ್ಳಲು ಬಯಸುವುದಿಲ್ಲ. ನನ್ನ ನಟನೆಯನ್ನು ಪ್ರಶಂಸಿಬೇಕೆಂದು ಬಯಸುತ್ತೇನೆ. ಹಿಂದಿನ ರಂಗನಾಯಕಿ ಆಗಿರಬಹುದು, ಅಥವಾ ಆನಾ, ತೋತಾಪುರಿ ಆಗಿರಬಹುದು, ವಿಶಿಷ್ಠ ಪಾತ್ರದೊಂದಿಗೆ ನಿರ್ದೇಶಕರು ತನನ್ನು ಸಂಪರ್ಕಿಸಿದಾಗ ತುಂಬಾ ಎಕ್ಸೈಟ್ ಆಗಿದ್ದಾಗಿ ತಿಳಿಸಿದರು.
ವಿವಿಧ ಚಿತ್ರಗಳ ನಡುವೆ ಗೊಂದಲಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ನನ್ನಗೆ ಗೊತ್ತಿಲ್ಲ ಎನ್ನುವ ಸ್ಯಾಂಡಲ್ ವುಡ್ ನ ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ಅದಿತಿ ಪ್ರಭುದೇವ, ಪ್ರಸ್ತುತ ಧನಂಜಯ್ ಜೊತೆಗೆ ಜಮಾಲಿ ಗುಡ್ಡ ಮತ್ತು ಪ್ರಜ್ವಲ್ ದೇವರಾಜ್ ಅವರೊಂದಿಗೆ ಮಾಫಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕ್ಯಾಮರಾ ಮುಂದೆ ಹೆಚ್ಚು ಆನಂದಿಸುತ್ತೇನೆ ಎಂದರು.
ಸಿನಿಮಾ ಕ್ಷೇತ್ರಕ್ಕೆ ಬಂದಾಗ ಯಾವುದೇ ನನಗೆ ಯಾವುದೇ ಬೆಂಬಲ ಇರಲಿಲ್ಲ. ನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೆ ಮುನ್ನಡೆದಿದ್ದೇನೆ. ಪ್ರತಿಯೊಂದು ಸಿನಿಮಾದಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಿದ್ದೆ. ನನ್ನಗೆ ಬಂದಂತಹ ಎಲ್ಲಾ ಅಭಿನಂದನೆ ಮತ್ತು ಟೀಕೆಗಳನ್ನು ಸ್ವೀಕರಿಸುತ್ತಿದ್ದೆ. ಸಿನಿಮಾ ಕ್ಷೇತ್ರಕ್ಕೆ ಬಂದಾಗ ಗಮನ ಸೆಳೆಯಲು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಅಲ್ಲಿ ಸಾಕಷ್ಟು ಒತ್ತಡವಿತ್ತು. ಆದರೆ, ಅದು ಕಲಾವಿದರ ಜರ್ನಿಯ ಭಾಗ ಎಂದರು.
ಇದನ್ನೂ ಓದಿ: ಅದಿತಿ ಪ್ರಭುದೇವ ನಟನೆಯ 'ಆನ' ಡಿಸೆಂಬರ್ 17 ರಂದು ರಿಲೀಸ್
ಆನಾ ಹಾರರ್ - ಫ್ಯಾಂಟಸಿ ಸಿನಿಮಾವಾಗಿದ್ದು, ದೇಶದ ಮೊದಲ ಮಹಿಳಾ ಸೂಪರ್ ಹೀರೋ ಉದಯ' ಎಂಬ ಶೀರ್ಷಿಕೆಯನ್ನು ಅದಿತಿ ವಿವರಿಸಿದ್ದಾರೆ. ಸೂಪರ್ ಹೀರೋ ಪದ ಆನಾ ಬಗ್ಗೆ ಪ್ರೇಕ್ಷಕರಿಂದ ವಿವಿಧ ರೀತಿಯ ನಿರೀಕ್ಷೆಗಳಿಗೆ ಕಾರಣವಾಗಬಾರದು. ಹಾಲಿವುಡ್ ಸಿನಿಮಾಗಳಲ್ಲಿ ಯಾವುದೇ ಸೂಪರ್ ಹೀರೋ ಯಾವಾಗಲೂ ತಮ್ಮ ಶಕ್ತಿಯಿಂದ ಉದಯಿಸುವುದನ್ನು ನೋಡಬಹುದು, ತದನಂತರ ಅವರು ಫ್ರಾಂಚೈಸಿ ಮಾಡೆಲ್ ಅನುಸರಿಸುತ್ತಾರೆ. 'ಆನಾ'ದಲ್ಲಿ ಮಹಿಳಾ ಸೂಪರ್ ಹೀರೋ ಉದಯಿಸುವುದನ್ನು ನೋಡಬಹುದು. ಅದನ್ನು ಪ್ರೇಕ್ಷಕರು ಇಷ್ಟಪಟ್ಟರೆ ಅದರ ಸೀಕ್ವೆಲ್ ಗೆ ಚಿತ್ರ ತಂಡ ಯೋಚಿಸುತ್ತದೆ ಎಂದು ಆದಿತಿ ಪ್ರಭುದೇವ ತಿಳಿಸಿದರು.
ಈ ಚಿತ್ರದಲ್ಲಿ ಆಕೆ ಮೂರು ಶೆಡ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ರಿಥ್ವಿಕ್ ಮುರಳೀಧರ್ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಆನಾದಲ್ಲಿನ ಅವರ ಕೆಲಸ ಮನತಟ್ಟಲಿದೆ ಎಂದರು.
ಆನಾ ಒಂದು ವಿಶಿಷ್ಟ ಚಿತ್ರವಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ “ನನಗೆ, ನನ್ನ ಮೇಲೆ ನಂಬಿಕೆ ಇಟ್ಟಿರುವ ನನ್ನ ನಿರ್ಮಾಪಕರು ಹೂಡಿರುವ ಬಂಡವಾಳ ಮರಳಿ ಪಡೆಯಬೇಕೆಂದು ನಾನು ಬಯಸುತ್ತೇನೆ. ನಿರ್ಮಾಪಕಿ ಪೂಜಾ ವಸಂತ್ ಬೆಂಬಲ ನೀಡಿದ್ದಾರೆ ಮತ್ತು ಚಿತ್ರತಂಡ ಯೋಗ್ಯವಾದ ಕೆಲಸವನ್ನು ಮಾಡಿದೆ ಎಂದು ಆದಿತಿ ಪ್ರಭುದೇವ ತಿಳಿಸಿದರು.