ಅದಿತಿ ಪ್ರಭುದೇವ ನಟನೆಯ 'ಆನ' ಡಿಸೆಂಬರ್ 17 ರಂದು ರಿಲೀಸ್

ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ತಂಡ ಸದ್ಯ ಚಿತ್ರ ರಿಲೀಸ್ ಮಾಡಲು ಸಿದ್ಧವಾಗಿದೆ.
ಆನ ಸಿನಿಮಾ ಸ್ಟಿಲ್
ಆನ ಸಿನಿಮಾ ಸ್ಟಿಲ್

ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ತಂಡ ಸದ್ಯ ಚಿತ್ರ ರಿಲೀಸ್ ಮಾಡಲು ಸಿದ್ಧವಾಗಿದೆ.

ಮನೋಜ್ ಪಿ ನಡಲುಮನೆ ಚೊಚ್ಚಲ ನಿರ್ದೇಶನದ ಸಿನಿಮಾವನ್ನು  ಕನ್ನಡದ ಮೊದಲ ಮಹಿಳಾ ಸೂಪರ್ ಹೀರೋ ಚಿತ್ರ ಎಂದು ಬಿಂಬಿಸಲಾಗಿದೆ.

ಆನ ಸಿನಿಮಾ ಡಿಸೆಂಬರ್ 17 ರಂದು ರಿಲೀಸ್ ಆಗಲಿದೆ,  ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.  ತಮ್ಮ ಸಿನಿಮಾದಲ್ಲಿ ಕೇವಲನಾಯಕ-ನಾಯಕಿಯನ್ನು ಹೈಲೈಟ್ ಮಾಡುವುದಲ್ಲ, ತಂತ್ರಜ್ಞರಿಗೆ ಪ್ರಾಮುಖ್ಯತೆ ಇರುವ ಸಿನಿಮಾವಾಗಿದೆ.

<strong>ಅದಿತಿ ಪ್ರಭುದೇವ</strong>
ಅದಿತಿ ಪ್ರಭುದೇವ

ಯುಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆನದಲ್ಲಿ ಅದಿತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com