ಮೈಸೂರು/ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ ಇಪ್ಪತ್ತೈದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದೆ.
ಹೀಗೆಂದು ಸ್ವತಃ ನಟ ದರ್ಶನ್ ಸೋಮವಾರ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸ್ನೇಹಿತರ ಜೊತೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರೆಸ್ ಮೀಟ್ ಮಾಡಿದ ದರ್ಶನ್, ಎಲ್ಲಾ ಕಡೆಯಿಂದ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದೆ. ಆರೋಪಿ ಅರುಣಾ ಕುಮಾರಿಯನ್ನು ಮೊದಲು ಪರಿಚಯಿಸಿದ್ದು ಸಹ ನಿರ್ಮಾಪಕ ಉಮಾಪತಿ ಎಂದು ಹೇಳಿದ್ದಾರೆ.
ಉಮಾಪತಿ ಅವರ ಅಣ್ಣ ದೀಪಕ್ ಅವರ ಕಡೆಯಿಂದ ಆರೋಪಿ ಅರುಣಾ ಕುಮಾರಿ ಪರಿಚಯ ಆದವರು. ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಪರಿಚಯ ಮಾಡಿದ್ದರು. ಲೋನ್ ವಿಚಾರವಾಗಿ ಸ್ನೇಹಿತರ ಹೆಸರೆಲ್ಲ ಹೇಳಲು ಪ್ರಾರಂಭಿಸಿದರು. ಬಳಿಕ ಉಮಾಪತಿ ಬಳಿ ಮನೆಗೆ ಕರೆದುಕೊಂಡು ಬರಲು ಹೇಳಿದೆ ಎಂದರು. ತೋಟದ ಮನೆ ಪರಿಶೀಲಿಸಬೇಕು ಅಂತ ಹೇಳಿದ್ರು. ತೋಟದ ಮನೆ ನನ್ನ ಹೆಸರಿನಲ್ಲಿ ಇಲ್ಲ ಪತ್ನಿ ಹೆಸರಿನಲ್ಲಿ ಇದೆ ಅಂತ ಹೇಳಿದರೂ, ವೆರಿಫೈ ಮಾಡಬೇಕು ಅಂದ್ರು. ಹಾಗಾಗಿ ತೋಟದ ಮನೆಗೆ ಹೋಗಲು ಹೇಳಿದೆ" ಎಂದು ದರ್ಶನ್ ಹೇಳಿದರು.
ಸ್ನೇಹಿತರಾದ ಹರ್ಷ ಮತ್ತು ನಾಗು, ರಾಕಿ ಅವರಿಗೂ ತೋಟದ ಮನೆಗೆ ಹೋಗಲು ಹೇಳಿದೆ. ಹರ್ಷ ಮತ್ತು ನಾಗು ನೋಡಿ ಅರುಣಾ ಕುಮಾರಿ ನೋಡಿ ಶಾಕ್ ಆದರು. ಬಳಿಕ ಅರುಣಾ ಕುಮಾರಿ ಯಾರಿಗೋ ಫೋನ್ ಮಾಡಿ ಎಲ್ಲರೂ ಬಂದಿದ್ದಾರೆ ಅಂತ ಮಾತನಾಡಿದರು. ಅಲ್ಲಿ ಹರ್ಷ ಮತ್ತು ರಾಕಿಗೆ ತಲೆ ಕೊಟ್ಟೋಯ್ತು ಎಂದರು.
ಬ್ಯಾಂಕ್ ಗೆ ದರ್ಶನ್ ಸ್ನೇಹಿತರಾದ ಹರ್ಷ ಮತ್ತು ರಾಕಿ ಬಂದಿದ್ದರು ಅಂತ ಅರುಣಾ ಮೊದಲು ಹೇಳಿದರು. ತೋಟದ ಮನೆ ವೆರಿಫೈ ಮಾಡಲು ಬಂದ ಸಮಯದಲ್ಲಿ ಹರ್ಷ ಮತ್ತು ರಾಕಿ ಇಬ್ಬರೂ ಬ್ಯಾಂಕ್ ಗೆ ಬಂದಿದ್ದು ನಾವೆನಾ ಅಂತ ಕೇಳಿದರು. ಲೋನ್ ತೆಗೆದುಕೊಳ್ಳುತ್ತಿರುವುದು ನಾವೇ ಆದರೆ ನಮಗೆ ಫೋನ್ ಮಾಡಬೇಕು ಅಲ್ವಾ ಅಂತ ಕೇಳಿದರು. ಆದರೆ ಅರುಣಾ ನೀವಲ್ಲ ಅಂತ ಹೇಳಿದರು. ಬಳಿಕ ಅಲ್ಲಿಂದ ಹೋಗಲು ಹೇಳಿದ್ವಿ ಎಂದರು. ಬಳಿಕ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಅರುಣಾ ಕುಮಾರಿ ಎನ್ನುವರೇ ಇರಲಿಲ್ಲ. ಬಳಿಕ ಅನುಮಾನ ಬಂತು. ನಾವು ಸ್ನೇಹಿತರೆಲ್ಲ ಕುಳಿತು ಮಾತನಾಡಿದ್ವಿ. ಬಳಿಕ ಉಮಾಪತಿಗೆ ಕಚೇರಿಗೆ ಹೋಗಿ ಅಲ್ಲಿ. ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ದೂರು ನೀಡಿದೆವು" ಎಂದು ಹೇಳಿದರು.
ದೂರು ನೀಡಿದ ಬಳಿಕ ಜೂನ್ 18ರ ಬೆಳಗ್ಗೆ ಕಾಲ್ ಬಂತು. ನಾನು ಮಾತನಾಡಬೇಕು ಸತ್ಯ ಹೇಳಬೇಕು ಅಂತ ಅರುಣಾ ಕುಮಾರಿ ಹೇಳಿದರು. ಮನೆಗೆ ಒಬ್ಬರೆ ಬಂದರು. ಯಾರು ಮಾಡಿಸಿದ್ದು ಅಂತ ಕೇಳಿದರೆ ಮಲ್ಲೇಶ್ ಎನ್ನುವವರ ಹೆಸರು ಹೇಳಿದರು. ಮಲ್ಲೇಶ್ ನಂಬರ್ ಗೆ ಕಾಲ್ ಮಾಡಿದರೆ ಬೇರೆ ಯಾರಿಗೋ ಹೋಯ್ತು. ಇದು ಫೇಕ್ ಎನ್ನುವುದು ಗೊತ್ತಾಯ್ತು. ಸತ್ಯ ಹೇಳಿ ಹೋಗಿ ಅಂತ ಕೇಳಿದ್ವಿ. ಬಳಿಕ ಉಮಾಪತಿ ದೂರಿನ ಕಾಪಿ ತೋರಿಸಿದ್ವಿ. ಕಾಪಿ ನೋಡಿದ ಬಳಿಕ ಉಮಾಪತಿ ಅವರೇ ಹೀಗೆಲ್ಲ ಮಾಡಿಸಿದ್ದು ಅಂತ ಉಮಾಪತಿ ಹೆಸರು ಹೇಳಿದರು. ಬಳಿಕ ಅಲ್ಲಿಂದ ಅರುಣಾ ಕುಮಾರಿಯನ್ನು ಕಳುಹಿಸಿದ್ವಿ" ಎಂದು ದರ್ಶನ್ ಹೇಳಿದರು.
ಉಮಾಪತಿ ಜೊತೆ ಆರೋಪಿ ಅರುಣಾ ಕುಮಾರಿ ಮಾಡಿರುವ ಚಾಟ್ ಇಲ್ಲಿದೆ ಎಂದು ಪಾಟ್ಸಪ್ ಚಾಟ್ ಅನ್ನು ಬಹಿರಂಗ ಪಡಿಸಿದರು. ಇಲ್ಲಿ ಕುಳಿತವರ ಮೇಲೆ ಅನುಮಾನವಿಲ್ಲ. ಇದನ್ನೆಲ್ಲ ಯಾರು ಮಾಡ್ತಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯಾರೆ ಮಾಡಿದರು ಅವರನ್ನು ಸುಮ್ಮನೆ ಬಿಡಲ್ಲ. ಈ ಬಗ್ಗೆ ಈಗ ಉಮಾಪತಿ ಅವರೆ ಸ್ಪಷ್ಟನೆ ನೀಡಬೇಕು. ಸ್ವಲ್ಪ ಟೈಂ ಕೊಡಿ ಅಂತ ಉಮಾಪತಿ ಹೇಳಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ.
ಪೊಲೀಸ್ ವಿಚಾರಣೆಯಲ್ಲೂ ಉಮಾಪತಿ ಹೆಸರು ಹೇಳಿದ್ದಾರೆ. ಎಲ್ಲಾ ಕಡೆಯಿಂದನೂ ಉಮಾಪತಿ ಹೆಸರು ಕೇಳಿಬರುತ್ತಿದೆ. ಸತ್ಯ ಹೇಳಿದರೆ ಮಕ್ಕಳನ್ನು ಸಾಯಿಸುವುದಾಗಿ ಉಮಾಪತಿ ಬೆದರಿಕೆ ಹಾಕ್ತಿದ್ದಾರೆ ಎಂದು ಹೇಳ್ತಿದ್ದಾರೆ. ಆದಾಗ್ಯೂ ನನ್ನ ಹಾಗೂ ಉಮಾಪತಿಯ ನಡುವೆ ಯಾವುದೇ ಕಿತ್ತಾಟ ನಡೆದಿರಲಿಲ್ಲ ಎಂದು ದರ್ಶನ್ ಹೇಳಿದ್ದಾರೆ.
Advertisement