ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಸಿನಿಮಾ ಶೂಟಿಂಗ್ ಪುನರಾರಂಭ

ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ
Updated on

ಲವ್ ಮಾಕ್ಟೇಲ್ -2 ಸಿನಿಮಾ ಚಿತ್ರೀಕರಣವನ್ನು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಪುನಾರಾರಂಭಿಸಿದ್ದಾರೆ.

ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

ಲವ್ ಮಾಕ್ಟೇಲ್ -2 ಸಿನಿಮಾಗಾಗಿ ಕೆಲವು ಮಾಂಟೇಜ್ ಸನ್ನಿವೇಶಗಳು ಬೇಕಾಗಿತ್ತು, ಈಪ್ರವಾಸದಲ್ಲಿ ಅದನ್ನು ಚಿತ್ರೀಕರಿಸಲು ನಾವು ಯಶಸ್ವಿಯಾಗಿದ್ದೇವೆ.ಸದ್ಯ ನಾವು ಬೆಂಗಳೂರಿಗೆ ಆಗಮಿಸಿದ್ದೇವೆ ಎಂದು ಕೃಷ್ಣ ತಿಳಿಸಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾದ ಕೆಲವು ಫಿಕ್ಚರ್ ಗಳನ್ನು ಕೃಷ್ಣ ಶೇರ್ ಮಾಡಿದ್ದಾರೆ. 2021 ರಲ್ಲೇ ತಮ್ಮ ಸಿನಿಮಾ ರಿಲೀಸ್ ಮಾಡುವ ಭರವಸೆ ವ್ಯಕ್ತ ಪಡಿಸಿದ್ದಾರೆ.

ನನ್ನ ಎಲ್ಲಾ ಕಮಿಟ್ ಮೆಂಟ್ ಗಳ ಜೊತೆ ಜೊತೆಗೆ ಲವ್ ಮಾಕ್ಟೇಲ್-2 ಸಿನಿಮಾ ಕಡೆಯೂ ಗಮನ ಕೇಂದ್ರಿಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದ್ದು, ಅದನ್ನು ಪೂರ್ಣಗೊಳಿಸಲು ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ ಒಳಗೆ ನನ್ನ ಸಿನಿಮಾ ರಿಲೀಸ್ ಮಾಡುವ ಭರವಸೆಯಿದೆ, ಆದರೆ ಕೋವಿಡ್ ಮತ್ತೆ ನನ್ನ ನಂಬಿಕೆಯನ್ನು ಹಾಳು ಮಾಡುವುದಿಲ್ಲ ಎಂಬ ಭರವಸೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಲವ್ ಮಾಕ್ಟೇಲ್ 2 ಸಿನಿಮಾವನ್ನು ನಿರ್ದೇಶಿಸುತ್ತಿರುವ ಕೃಷ್ಣ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಚೇಲ್ ಡೇವಿಡ್ ಕನ್ನಡದಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.   ಸುಶ್ಮಿತಾ ಮತ್ತು ಅಭಿಲಾಷ್ ನಟಿಸಿದ್ದು, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com