ಜುಲೈ 2ನೇ ವಾರದಲ್ಲಿ 'ಪೆಟ್ರೋಮ್ಯಾಕ್ಸ್' ಟೀಸರ್ ಬಿಡುಗಡೆ

ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ನೀನಾಸಂ ಸತೀಶ್ ಮತ್ತು ಹರಿಪ್ರಿಯಾ
ನೀನಾಸಂ ಸತೀಶ್ ಮತ್ತು ಹರಿಪ್ರಿಯಾ

ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. 

ಜುಲೈ 2 ನೇ ವಾರದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾ ಟೀಸರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.

ಸಿದ್ಲಿಂಗು, ನೀರ್ ದೋಸೆ ಗಳಂತ ಕ್ಲಾಸಿಕ್ ಸಿನಿಮಾ ನಿರ್ದೇಶಿಸಿರುವ  ವಿಜಯ ಪ್ರಸಾದ್ ಪೆಟ್ರೋಮ್ಯಾಕ್ಸ್ ನಂತ ವಿಭಿನ್ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಾಲ್ಕು ಅನಾಥ ಮಕ್ಕಳು ಮತ್ತು ವೃದ್ದೆ ಜೊತೆಗಿನ ಭಾವನಾತ್ಮಕ ಸಂಬಂಧ ಕುರಿತ ಕಥೆ ಇದಾಗಿದೆ.

ಪಾತ್ರಗಳು ಹೇಗೆ ಭೇಟಿಯಾಗುತ್ತವೆ ಮತ್ತು ಹೇಗೆ ಒಟ್ಟಿಗೆ ಪ್ರಯಾಣಿಸುತ್ತವೆ ಎಂಬುದನ್ನು ಹಾಸ್ಯ, ಎಮೋಶನ್ ಮತ್ತು ಭಾವನೆಗಳ ಬೆಸೆದು ಸಿನಿಮಾ ತಯಾರಿಸಲಾಗಿದೆ ಎಂದು ವಿಜಯಾ ಪ್ರಸಾದ್ ತಿಳಿಸಿದ್ದಾರೆ, ಕೇವಲ 36 ದಿನಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.

ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ನೀಸಾಸಂ ಸತೀಶ್ ಹಾಗೂ ಹರಿಪ್ರಿಯಾ ನಟಿಸಿದ್ದಾರೆ. ಸತೀಶ್ ಪಿಕ್ಚರ್ಸ್ ಸ್ಟುಡಿಯೋ 18 ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ, ನಿರಂಜನ ಬಾಬು ಛಾಯಾಗ್ರಹಣವಿದೆ,
ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಥಿಯೇಟರ್ ಗಳಲ್ಲೇ ರಿಲೀಸ್ ಮಾಡಲಿದ್ದು, ಪ್ರೇಕ್ಷಕರು ಸಿನಿಮಾ ಎಂಜಾಯ್ ಮಾಡಲಿದ್ದಾರೆ ಎಂದು ವಿಜಯ ಪ್ರಸಾದ್ ತಿಳಿಸಿದ್ದಾರೆ,

ವಿಜಯಾ ಪ್ರಸಾದ್ ತೋತಾಪುರಿ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದು ಮತ್ತೊಂದು ಕ್ಲಾಸಿಕ್ ಸಿನಿಮಾವಾಗಿದ್ದು, ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com