ಕೊರೋನಾ ಎರಡನೇ ಅಲೆಯಿಂದಾಗಿ ಚಿತ್ರರಂಗ ಮತ್ತೆ ಬಂದ್ ಆಗಿದ್ದು ಈ ಸಮಯವನ್ನು ದಿಯಾ ಹೀರೋ ಪೃಥ್ವಿ ಅಂಬಾರ್ ಕಥೆಯನ್ನು ಬರೆಯಲು ಬಳಸಿಕೊಳ್ಳುತ್ತಿದ್ದಾರೆ.
ಬರಹಗಾರ ಮತ್ತು ಗಾಯಕ ಕೂಡ ಆಗಿರುವ ಪೃಥ್ವಿ ಬೆರಳೆಣಿಕೆಯಷ್ಟು ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದು ಲೈಫ್ ಈಸ್ ಬ್ಯೂಟಿಫುಲ್ ಮತ್ತು ಶುಗರ್ಲೆಸ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ, ತಾತ್ಕಾಲಿಕವಾಗಿ ಶಿವಪ್ಪ ಎಂಬ ಶೀರ್ಷಿಕೆಯ ಚಿತ್ರದ ಚಿತ್ರೀಕರಣ ಮತ್ತು ನಿರ್ದೇಶಕ ಎಚ್ ಲೋಹಿತ್ ಅವರೊಂದಿಗಿನ ಯೋಜನೆಗಳು ಸದ್ಯ ಬಾಕಿ ಉಳಿದಿವೆ.
"ನಾನು ಒಂದೆರಡು ಯೋಜನೆಗಳಿಗಾಗಿ ಮಾತುಕತೆ ನಡೆಸುತ್ತಿದ್ದೇನೆ, ನಾನು ಆ ಚಿತ್ರಗಳನ್ನು ಒಪ್ಪಿಕೊಂಡು ಸಹಿ ಮಾಡಿದ ನಂತರ ಅದನ್ನು ಅಧಿಕೃತವಾಗಿ ಘೋಷಿಸಲಾಗುವುದು. ಇದೀಗ, ನಾನು ಶೂಟಿಂಗ್‌ಗೆ ಮರಳಲು ಕಾಯುತ್ತಿದ್ದೇನೆ" ಎಂದು ನಟ ಹೇಳುತ್ತಾರೆ.
2020ರಲ್ಲಿ ತೆರೆಕಂಡಿದ್ದ ಕೆ.ಎಸ್ ಅಶೋಕ್ ನಿರ್ದೇಶನದ ದಿಯಾ ಚಿತ್ರದ ಮೂಲಕ ಪೃಥ್ವಿ ಚಿತ್ರರಸಿಕರ ಗಮನ ಸೆಳೆದಿದ್ದರು. ಇದೇ ಚಿತ್ರ ಇದೀಗ ಬಾಲಿವುಡ್ ನಲ್ಲೂ ನಿರ್ಮಾಣವಾಗುತ್ತಿದೆ ಈ ಚಿತ್ರದ ಮೂಲಕ ಪೃಥ್ವಿ ಬಿ-ಟೌನ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಡುಗಡೆಯ ದಿನಾಂಕವನ್ನು ಊಹಿಸುವುದು ಕಷ್ಟ. ಮೊದಲ ಬಾಲಿವುಡ್ ಚಿತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಅವರು, "ಇದು ನನ್ನ ಮೊದಲ ಹಿಂದಿ ಚಲನಚಿತ್ರ ಮತ್ತು ನಾನು ಆದಿ ಪಾತ್ರವನ್ನು ಪುನರಾವರ್ತಿಸುತ್ತಿದ್ದೇನೆ. ನಾನು ಇನ್ನೂ ಪಾತ್ರಕ್ಕೆ ಸ್ವಲ್ಪ ತಾಜಾತನವನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಇದಲ್ಲದೆ, ನಾನು ಹಂಚಿಕೊಳ್ಳಲು ಇಚ್ಛಿಸುವ ಮತ್ತೊಂದು ವಿಷಯವೆಂದರೆ ಚಿತ್ರದಲ್ಲಿ ನನ್ನ ತಾಯಿಯ ಪಾತ್ರವನ್ನು ಮೃಣಾಲ್ ಕುಲಕರ್ಣಿ ಮಾಡಿದ್ದಾರೆ ಎಂದರು.
Advertisement