ಸುದೀಪ್
ಸುದೀಪ್

ಶಂಕರ್-ರಾಮ್ ಚರಣ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಮುಖ್ಯ ಪಾತ್ರ!

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಅವರ ಸಹಕಾರದೊಡನೆ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ನಿರ್ದೇಶಕ ಶಂಕರ್ ತೆಲುಗು ನಟ ರಾಮ್ ಚರಣ್ ಅವರೊಂದಿಗೆ ಕೆಲಸ ಕೈಜೋಡಿಸಲಿದ್ದಾರೆ. ಎಂದು ಫೆಬ್ರವರಿಯಲ್ಲಿ ಪ್ರಕಟಣೆ ಹೊರಬಿದ್ದಿತ್ತು.
Published on

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಅವರ ಸಹಕಾರದೊಡನೆ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ನಿರ್ದೇಶಕ ಶಂಕರ್ ತೆಲುಗು ನಟ ರಾಮ್ ಚರಣ್ ಅವರೊಂದಿಗೆ ಕೆಲಸ ಕೈಜೋಡಿಸಲಿದ್ದಾರೆ ಎಂದು ಫೆಬ್ರವರಿಯಲ್ಲಿ ಪ್ರಕಟಣೆ ಹೊರಬಿದ್ದಿತ್ತು. ಈ ಸಂಬಂಧ ಹೊಸ ಸುದ್ದಿ ಎಂದರೆ ತಯಾರಕರು ನಟ ಸುದೀಪ್ ಅವರನ್ನು ಇನ್ನೂ ಪ್ರಾರಂಭಿಸದ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಕೇಳಿದ್ದಾರೆ.

ಯೋಜನೆಗೆ ತಯಾರಿ ನಡೆಸುತ್ತಿರುವ ಅನುಭವಿ ನಿರ್ದೇಶಕ ಸುದೀಪ್ ಅವರನ್ನು ಸಂಪರ್ಕಿಸಿದ್ದಾರೆ. ಚಿತ್ರಕಥೆಯನ್ನು ನಿರೂಪಿಸಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿದೆ. ಹಾಗಿದ್ದರೂ "ಪೈಲ್ವಾನ್" ನಾಯಕ ನಟ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ದಕ್ಷಿಣದಲ್ಲಿ ಪರಿಚಿತ ಹೆಸರಾಗಿರುವ ಸುದೀಪ್ ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಕ್ತ ಚರಿತ್ರ ಮೂಲಕ ತಮ್ಮ ಸಿನಿಪ್ರಯಾಣ ಪ್ರಾರಂಭಿಸಿದ್ದರು. ಎಸ್.ಎಸ್.ರಾಜಮೌಳಿ ಅವರ ಥ್ರಿಲ್ಲರ್, ಈಗದಲ್ಲಿನ ಅವರ ಪಾತ್ರದ ನಂತರ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈ ಚಿತ್ರವನ್ನು ತಮಿಳಿನಲ್ಲಿ ನಾನಿ ಎಂದು ರೀಮೇಕ್ ಮಾಡಲಾಗಿದ್ದು ಹಿಂದಿಯಲ್ಲಿ ಮಕ್ಕಿ ಎಂಬ ಹೆಸರಲ್ಲಿ ಬಿಡುಗಡೆಯಾಗಿದೆ. ಇದಲ್ಲದೆ ಬಾಹುಬಲಿ: ದಿ ಬಿಗಿನಿಂಗ್ ಚಿರಂಜೀವಿ, ಸೈ ರಾ ನರಸಿಂಹ ರೆಡ್ಡಿ ಇನ್ನೂ ಮೊದಲಾದ ತೆಲುಗು ಸಿನಿಮಾಗಳಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ದಬಂಗ್  3 ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಸುದೀಪ್, ಈಗ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ  3 ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಕೋಟಿಗೊಬ್ಬ 3 ಚಿತ್ರ ಏಪ್ರಿಲ್ 29 ರಂದು ಬಿಡುಗಡೆ ಆಗಬೇಕಿತ್ತು,ಆದರೆ ಕೋವಿಡ್ -19 ರ ಎರಡನೇ ಅಲೆಯ ಕಾರಣದಿಂದ  ಮುಂದೂಡಲ್ಪಟ್ಟಿದೆ.. ಈ ಚಿತ್ರದ ಹೊರತಾಗಿ, ಅವರು ವಿಕ್ರಾಂತ್ ರೋಣ ಸಿನಿಮಾದ  ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಚಿತ್ರದ ಒಂದು ಹಾಡು ಮಾತ್ರ ಬಾಕಿ ಇದೆ.  ಪ್ರೊಡಕ್ಷನ್ ಹೌಸ್ ಯೋಜನೆಯ ಪ್ರಕಾರ ಎಲ್ಲವೂ ನಡೆದರೆ ವಿಕ್ರಾಂತ್ ರೋಣ  ಆಗಸ್ಟ್ 19 ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.

ಏತನ್ಮಧ್ಯೆ, ಇತ್ತೀಚೆಗೆ ಸುದೀಪ್ ಅನಾರೋಗ್ಯಕ್ಕೆ ತುತ್ತಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಅವರ ಆರೋಗ್ಯದ ಬಗ್ಗೆತಾವೇ ಟ್ವಿಟ್ತರ್ ನಲ್ಲಿ ಬಹಿರಂಗಪಡಿಸಿದ್ದಾರೆ.ಅವರು ತಮ್ಮ ಸ್ನೇಹಿತರು ಮತ್ತು ಅಭಿಮಾನಿಗಳ ಕಾಳಜಿ ಮತ್ತು ಪ್ರಾರ್ಥನೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದ್ದು  ಬಿಗ್ ಬಾಸ್ ಕನ್ನಡ ಸೀಸನ್ 8 ರ ಆತಿಥ್ಯ ವಹಿಸಿದ್ದ ಸುದೀಪ್ ಅವರು ಕಳೆದ ಮೂರು ವಾರಗಳಿಂದ ವಾರಾಂತ್ಯದ ಪಂಚಾಯಿತಿಯಲ್ಲಿ ಭಾಗವಹಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com