'ರಾಬರ್ಟ್' ಹಿಟ್ ಜೋಡಿ ವಿನೋದ್ ಪ್ರಭಾಕರ್- ಸೋನಾಲ್ ಮಾಂಟೆರೊಗೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಡಿಮ್ಯಾಂಡ್!

ಮಾರ್ಚ್ 11 ರಂದು ಬಿಡುಗಡೆಯಾದ ದರ್ಶನ್ ಅಭಿನಯದ "ರಾಬರ್ಟ್" ಬ್ಲಾಕ್ ಬಸ್ಟರ್ ಎನಿಸಿಕೊಂಡದ್ದಲ್ಲದೆ, ಹಿಟ್ ಜೋಡಿ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮಾಂಟೆರೊ ಅವರನ್ನೂ ಮುನ್ನೆಲೆಗೆ ತಂದಿದೆ.
ವಿನೋದ್ ಪ್ರಭಾಕರ್ ಸೋನಾಲ್ ಮಾಂಟೆರೊ
ವಿನೋದ್ ಪ್ರಭಾಕರ್ ಸೋನಾಲ್ ಮಾಂಟೆರೊ
Updated on

ಮಾರ್ಚ್ 11 ರಂದು ಬಿಡುಗಡೆಯಾದ ದರ್ಶನ್ ಅಭಿನಯದ "ರಾಬರ್ಟ್" ಬ್ಲಾಕ್ ಬಸ್ಟರ್ ಎನಿಸಿಕೊಂಡದ್ದಲ್ಲದೆ, ಹಿಟ್ ಜೋಡಿ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮಾಂಟೆರೊ ಅವರನ್ನೂ ಮುನ್ನೆಲೆಗೆ ತಂದಿದೆ. ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ಅವರು ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಿರ್ದೇಶಕ ಹರಿಪ್ರಸಾದ್ ಜಯಣ್ಣ ಸೇರಿದಂತೆ ಬೆರಳೆಣಿಕೆಯಷ್ಟು ಚಲನಚಿತ್ರ ನಿರ್ಮಾಪಕರು ಈ ಇಬ್ಬರು ನಟರನ್ನು ತಮ್ಮ ಮುಂದಿನ ಯೋಜನೆಯಲ್ಲಿ ಪ್ರಮುಖ ಜೋಡಿಯಾಗಿ ಕಾಣಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತು. ಈ ಬಗ್ಗೆ ವಿನೋದ್ ಅವರನ್ನು ಕೇಳಿದಾಗ ಅವರೂ ಈ ಬಗ್ಗೆ ಸುದ್ದಿಗಳನ್ನು ದೃಢಪಡಿಸಿದ್ದಾರೆ. ಅವರಿಗೆ ವಿವಿಧ ಸ್ಕ್ರಿಪ್ಟ್‌ಗಳು ಬಂದಿದ್ದು ಅನೇಕ ಎನ್ ಕ್ವೈರಿ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದನ್ನೂ ಅಂತಿಮಗೊಳಿಸಿಲ್ಲ.

"ರಾಬರ್ಟ್ ನಲ್ಲಿ ನಾವು ನಟಿಸಿದ ಪಾತ್ರಗಳು ಪ್ರೇಕ್ಷಕರಲ್ಲಿ ಮೆಚ್ಚುಗೆ ಗಳಿಸಿದೆ. ಆರಂಭದಲ್ಲಿ ನನ್ನನ್ನು ಟೈಗರ್ ಎಂದು ಸಂಬೋಧಿಸಿದ ಜನರು ಈಗ ನನ್ನನ್ನು ರಾಘವ್ ಅಣ್ಣ ಎಂದೂ ಸೋನಾಲ್ ಅವರನ್ನು ತನು ಎಂದು ಕರೆಯಲು ಪ್ರಾರಂಭಿಸಿದ್ದಾರೆ. ನಾವು ಮಾಡುವ ಪಾತ್ರಗಳಿಂದ ಗುರುತಿಸಲ್ಪಟ್ಟಾಗ ಇದು ನಮ್ಮ ಪಾಲಿಗೆ ಹೆಚ್ಚುವರಿ ಗೌರವವಾಗಿದೆ.

"ಸೆಟ್‌ಗಳಲ್ಲಿ ನಮ್ಮನ್ನು ಭೇಟಿಯಾಗುವವರು ನಮ್ಮನ್ನು ಮತ್ತೆ ಯಾವಾಗ ಪರದೆಯ ಮೇಲೆ ಜೋಡಿಯಾಗುತ್ತೀರಿ ಎಂದು ವಿಚಾರಿಸುತ್ತಾರೆ. ನಮ್ಮ ಜೋಡಿಯನ್ನು ಯಶಸ್ವಿಯಾಗಿಸಲು ಬಯಸುವ ನಿರ್ದೇಶಕರು ಸಹ ನಮಗೆ ವಿಭಿನ್ನ ಸ್ಕ್ರಿಪ್ಟ್‌ಗಳನ್ನು ನಿರೂಪಿಸುತ್ತಿದ್ದಾರೆ. ನಾವು ಮತ್ತೆ ಒಟ್ಟಿಗೆ ಕೆಲಸ ಮಾಡುವುದು ಖಚಿತ, ಆದರೆ ಯಾವ ಯೋಜನೆ ಎಂದು ನಾವಿನ್ನೂ ನಿರ್ಧರಿಸಬೇಕು. ನಾವು ಸೂಕ್ತವಾದ ಕಥೆಯನ್ನು ಪಡೆದ ನಂತರ  ನಿರ್ದೇಶಕರು ಮತ್ತು ಪ್ರೊಡಕ್ಷನ್ ಹೌಸ್ ಒಪ್ಪಿಕೊಂಡಾಗ ಈ ಕುರಿತು ಅಧಿಕೃತ ಪ್ರಕಟಣೆಯನ್ನು ಮಾಡಲಾಗುವುದು. ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಾಗಿ ಇಲ್ಲದಿದ್ದರೆ, ನಾವು ಒಂದು ಯೋಜನೆಯನ್ನು ಒಪ್ಪಿಕೊಳ್ಳುತ್ತಿದ್ದೆವು. ಆದರೆ ಈಗ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.

"ನಾನು ಲಂಕಾಸುರ ಚಿತ್ರಕ್ಕಾಗಿ ಗಡ್ಡವನ್ನು ಬಿಡುತ್ತಿದ್ದೇನೆ. ಇದಾಗಲೇ ಶೇ.40 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಮುಂದಿನ ಭಾಗಗಳನ್ನು ಪ್ರಾರಂಭಿಸಲು ಕಾಯುತ್ತಿದ್ದೇನೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಅದನ್ನು ಪುನರಾರಂಭಿಸಲಾಗುತ್ತದೆ” ಎಂದು ವಿನೋದ್ ಹೇಳಿದ್ದಾರೆ. ಏತನ್ಮಧ್ಯೆ, ನಟ ಕನಿಷ್ಠ ಅರ್ಧ ಡಜನ್ ಚಲನಚಿತ್ರಗಳನ್ನು ಸಹಿ ಮಾಡಿದ್ದಾರೆ. 

ಇನ್ನೊಂದೆಡೆ ನಟಿ ಸೋನಾಲ್ "ತಲ್ವಾರ್ ಪೇಟೆ" ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ "ಶಂಭೋ ಶಿವಶಂಕರ" ಆಕೆ ಅಭಿನಯಿಸಿರುವ ಇನ್ನೊಂದು ಸಿನಿಮಾ ಆಗಿದೆ. ಅಲ್ಲದೆ "ಬುದ್ದಿವಂತ 2" ಸಹ ಅವರ ಲಿಸ್ಟ್ ನಲ್ಲಿದೆ. ನಟಿ ಇತ್ತೀಚೆಗೆ "ಶುಗರ್ ಫ್ಯಾಕ್ಟರಿ" ಚಿತ್ರೀಕರಣಕ್ಕಾಗಿ ಗೋವಾಗೆ ಹೋಗಿ ಬಂದಿದ್ದಾರೆ. ಆ ಚಿತ್ರದ ನಿರ್ಣಾಯಕ ಭಾಗಗಳ ಶೂಟಿಂಗ್ ಪೂರ್ಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com