ರಿಷಬ್ ಶೆಟ್ಟಿಯ 'ಹೀರೋ'ಗೆ ಸಿಕ್ತು ಬಾಕಿ ಮೊತ್ತ, ಈಗ Zee5 ನಲ್ಲಿ ಪ್ರಸಾರ!

ಹಿಂದಿನ ಲಾಕ್‌ಡೌನ್ ಸಮಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ 2021ರ ಮಾರ್ಚ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕ್ರೈಮ್ ಥ್ರಿಲ್ಲರ್ ಈಗ ಮೇ 9ರಿಂದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಪ್ರಸಾರವಾಗುತ್ತಿದೆ.
ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'
ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'

ಹಿಂದಿನ ಲಾಕ್‌ಡೌನ್ ಸಮಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ 2021ರ ಮಾರ್ಚ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕ್ರೈಮ್ ಥ್ರಿಲ್ಲರ್ ಈಗ ಮೇ 9ರಿಂದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಪ್ರಸಾರವಾಗುತ್ತಿದೆ.

ಹೀರೋ ಚಿತ್ರವನ್ನು ಭಾರತ್ ರಾಜ್ ಎಂ ಚೊಚ್ಚಲ ನಿರ್ದೇಶನ ಮಾಡಿದ್ದರು. ಗಾನವಿ ಲಕ್ಷ್ಮಣ ನಾಯಕಿಯಾಗಿ ಮತ್ತು ಪ್ರಮೋದ್ ಶೆಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ದೊಡ್ಡ ಬಜೆಟ್ ಚಲನಚಿತ್ರಗಳ ಜೊತೆಗೆ ಬಿಡುಗಡೆಯಾಗಿದ್ದ ಹೀರೋ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಜೊತೆಗೆ 45 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಓಡಿತು. ನಮ್ಮ ಚಿತ್ರದ ಬಗ್ಗೆ ಆಸಕ್ತಿ ತೋರಿಸಿದ ಡಿಜಿಟಲ್ ಪ್ಲಾಟ್‌ಫಾರ್ಮ್‌ನಿಂದಲೂ ನಮಗೆ ಬೆಂಬಲ ಸಿಕ್ಕಿದ್ದು ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂದು ನಟ, ನಿರ್ಮಾಪಕ ರಿಷಬ್ ಶೆಟ್ಟಿ ಹೇಳಿದ್ದಾರೆ.  

ಈ ಲಾಕ್‌ಡೌನ್ ಸಮಯದಲ್ಲಿ ಕಳೆದ ಬಾರಿ ಮಾಡಿದಂತೆ ಚಲನಚಿತ್ರದಲ್ಲಿ ಕೆಲಸ ಮಾಡುವ ಯಾವುದೇ ಯೋಜನೆಗಳಿಲ್ಲ ಎಂದು ರಿಷಬ್ ಶೆಟ್ಟಿ ಹೇಳುತ್ತಾರೆ. ಆದರೆ, ತಮ್ಮ ಬ್ಯಾನರ್ ಕುಂದಾಪುರದ ಚಿತ್ರ ನಿರ್ಮಾಪಕ ಪ್ರಸ್ತುತ ಹೊಸ ಚಿತ್ರಕಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಒಂದು ಸುಂದರವಾದ ಸಾಲು ಸಿಕ್ಕಿದೆ. ಅದು ನನ್ನ ಬದುಕಿಗೂ ನಿಕಟ ಸಂಬಂಧ ಹೊಂದಿದೆ. ನಾನು ಸ್ಕ್ರಿಪ್ಟ್ ರೂಪಿಸುವಲ್ಲಿ ನಿರತನಾಗಿದ್ದೇನೆ. ಎಲ್ಲವೂ ಅಂತಿಮವಾದರೆ ನಿರ್ದೇಶನ ಮಾಡುವುದಾ ಅಥವಾ ನಿರ್ಮಾಣ ಮಾಡುವುದಾ ಎಂದು ನಾನು ಯೋಜಿಸುತ್ತೇನೆ ಎಂದರು.  

ನಾಲ್ಕು ದಿನಗಳ ಕೆಲಸದಲ್ಲಿ ಉಳಿದಿರುವ ಹರಿಕಥೆ ಅಲ್ಲಾ ಗಿರಿಕಥೆ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಿತ್ತು. "ಲಾಕ್ ಡೌನ್ ಇಲ್ಲದಿದ್ದರೆ, ನಾವು ಪೋಸ್ಟ್-ಪ್ರೊಡಕ್ಷನ್ ಕೆಲಸ ಮಾಡಬೇಕಿತ್ತು, ಆದರೆ ಸಾಂಕ್ರಾಮಿಕವು ಇಡೀ ಯೋಜನೆಯನ್ನು ಅತಂತ್ರಗೊಳಿಸಿದೆ ಎಂದು ರಿಷಬ್ ಹೇಳುತ್ತಾರೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ನಿರ್ವಹಿಸುತ್ತಿದೆ ಎಂದರು. 

ಲಾಕ್ ಡೌನ್ ಹೀಗೆ ಮುಂದುವರೆದರೆ ಕನ್ನಡ ಉದ್ಯಮ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ, ನೇರ ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ನಾವು ಉತ್ತಮ ವೇದಿಕೆಯನ್ನು ಪಡೆದುಕೊಂಡಿದ್ದೇವೆ. ನಾವು ಸರಿಯಾದ ರೀತಿಯ ಜನರನ್ನು ತಲುಪಲು ಸಾಧ್ಯವಾದರೆ ಅದರಿಂದ ನಿರ್ಮಾಪಕರಿಗೆ ಯೋಗ್ಯವಾದ ಲಾಭ ದೊರೆತರೆ, ನಾವು ಖಂಡಿತವಾಗಿಯೂ ಒಂದು ಹೆಜ್ಜೆ ಇಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com