ಚಂದನ್ ಶೆಟ್ಟಿ
ಚಂದನ್ ಶೆಟ್ಟಿ

ಚಂದನ್ ಶೆಟ್ಟಿಯ 12 ನೇ ರ‍್ಯಾಪ್ ಸಾಂಗ್ 'ಸಲಿಗೆ' ಮೇ 28ಕ್ಕೆ ರಿಲೀಸ್

ಕನ್ನಡದ ರ‍್ಯಾಪರ್‌ ಹಾಗೂ ಗೀತ ರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ‘ಸಲಿಗೆ’ ಮೇ 28 ರಂದು ಬಿಡುಗಡೆಯಾಗಲಿದ್ದು, ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ.
Published on

ಕನ್ನಡದ ರ‍್ಯಾಪರ್‌ ಹಾಗೂ ಗೀತ ರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ‘ಸಲಿಗೆ’ ಮೇ 28 ರಂದು ಬಿಡುಗಡೆಯಾಗಲಿದ್ದು, ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ.

2019ರಲ್ಲೇ ಕಾಂಪೋಸ್ ಮಾಡಲಾಗಿದ್ದ ಸಲಿಗೆ, ಕನ್ನಡದಲ್ಲಿ ಈ ಹಿಂದೆ ಇಂಥ ಪ್ರಯೋಗ ಎಂದೂ ಮಾಡಿಲ್ಲ. ಹೀಗಾಗಿ ಹಾಡನ್ನು ಬಿಡುಗಡೆ ಮಾಡಲು ಹಿಂದುಮುಂದು ನೋಡುತ್ತಿದ್ದೆ. 2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ವೇಳೆ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದ್ದು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್. "ನಾನು ಯಾವಾಗಲೂ ನನ್ನ ಸಿಂಗಲ್ಸ್‌ಗೆ ಹೆಸರುವಾಸಿಯಾಗಿದ್ದೇನೆ, ಆದರೆ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ ಎಂದು ಚಂದನ್ ಹೇಳಿದ್ದಾರೆ. 

ನಾನು ಬದಲಾವಣೆಯನ್ನು ಬಯಸುತ್ತೇನೆ ಮತ್ತು ಹೊಸ ರೀತಿಯ ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಅಚ್ಚರಿಗೊಳಿಸಲು ಇಷ್ಟಪಡುತ್ತೇನೆ, ಹಾಡು ಸಿದ್ಧವಾಗಿದ್ದರೂ, ಅದನ್ನು ಹೊರಗೆ ತರಲು ನಾನು ಕಾಯುತ್ತಿದ್ದೆ.  ಇದು ಸರಿಯಾದ ಸಮಯ ಎಂದು ನಾನು ಭಾವಿಸಿ ರಿಲೀಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಜನರ ಅಭಿರುಚಿ ಬದಲಾಗುತ್ತಿರುತ್ತದೆ, ಮೊದಲು ಮೈಕಲ್ ಜಾಕ್ಸನ್ ನಂತರ, ರೆಟ್ರೋ ಈಗ ಮತ್ತೆ ಫಂಕ್ ಹಾಡುಗಳನ್ನು ಕೇಳಲು ಬಯಸುತ್ತಾರೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

ನಟನೆ, ನಿರ್ದೇಶನ, ಸಂಯೋಜನೆ ಮತ್ತು ಎಡಿಟಿಂಗ್ ಎಲ್ಲಾ ಕೆಲಸವನ್ನು ಚಂದನ್ ಅವರೇ ನಿರ್ವಹಿಸುತ್ತಾರೆ. ಇದು ನನಗೆ ಮತ್ತು ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಪ್ರಕಾರವಾಗಿದೆ. ಎಲ್ಲಾ ವೀಕ್ಷಕರು ತಮ್ಮ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳಬೇಕು ಮತ್ತು ಯಾವುದೇ ನಿರೀಕ್ಷೆಗಳಿಲ್ಲದೆ ಹಾಡನ್ನು ಕೇಳಬೇಕೆಂದು ನಾನು ಬಯಸುತ್ತೇನೆ ಎಂದು ಚಂದನ್ ತಿಳಿಸಿದ್ದಾರೆ.

ಇದರ ನಡುವೆ ಪೊಗರು ಚಿತ್ರದಲ್ಲಿ ಹಿಟ್ ಸಾಂಗ್ ನೀಡಿದ ಚಂದನ್, ಸದ್ಯ ನಿರ್ದೇಶಕ ನಂದ ಕಿಶೋರ್ ಮತ್ತು ನಟ ಧೃವ ಸರ್ಜಾ ಅವರ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com