ಮೊದಲು ಅಪ್ಪುವಿಗಿದ್ದ ಹೆಸರು ಲೋಹಿತ್ ಆಗಿತ್ತು, ಅಲ್ಪಾಯುಷ್ಯದ ಹೆಸರೆಂದು ಹಿರಿಯರ ಸೂಚನೆಯಂತೆ ಸತ್ಯ ಹರಿಶ್ಚಂದ್ರ ಸಿನಿಮಾ ಬಳಿಕ ಬದಲಿಸಲಾಗಿತ್ತು.
ಡಾ. ರಾಜ್‌ಕುಮಾರ್ ಅವರು ಪುನೀತ್ ಎಂದು ಹೆಸರು ಬದಲಾಯಿಸಿದ್ದರು. ಇದಕ್ಕೆ ಬಹಳ ಮುಖ್ಯ ಕಾರಣವೂ ಇತ್ತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಸಾಕಷ್ಟು ಮಂದಿ ಅಚ್ಚರಿ ಹೊರ ಹಾಕಿದ್ದಾರೆ. ಲೋಹಿತಾಶ್ವ ಎಂದರೆ ಅಲ್ಪಾಯುಷಿ ಎಂಬರ್ಥ ಇದೆಯಂತೆ. ಈ ಕಾರಣಕ್ಕೆ ಡಾ. ರಾಜ್ ಈ ಹೆಸರನ್ನು ಬದಲಿಸಿದ್ದರು.
ರಾಜ್‌ಕುಮಾರ್ ಅವರಿಗೆ ಮಗನಿಗೆ ಲೋಹಿತ್ ಎಂದು ಹೆಸರು ಇಡಬೇಕು ಅನಿಸಿದ್ದು ‘ಸತ್ಯ ಹರಿಶ್ಚಂದ್ರ’ ಸಿನಿಮಾದಿಂದ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ. ಈ ಹೆಸರು ರಾಜ್ಕುಮಾರ್ಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರಣಕ್ಕೆ ಮಗನಿಗೆ ಲೋಹಿತ್ ಎಂದು ಹೆಸರು ಇಟ್ಟಿದ್ದರು ಅಣ್ಣಾವ್ರು. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವ ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಈ ಕಾರಣಕ್ಕೆ ರಾಜ್ಗೆ ಹೆಸರು ಬದಲಿಸಲು ಸೂಚಿಸಿದ್ದರು.
ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರು ಲೋಹಿತ್ ಎಂದು ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ, ಲೋಹಿತ್ ಅನ್ನೋದು ಅಲ್ಪಾಯುಷಿಗೆ ಇರುವಂತಹ ಹೆಸರು. ಹೀಗಾಗಿ ಪುನೀತ್ ಎಂದು ಬದಲಿಸಲು ಸೂಚಿಸಿದ್ದರು. ಆಗ ಲೋಹಿತ್ ಅನ್ನೋ ಹೆಸರನ್ನು ಅಣ್ಣಾವ್ರು ಬದಲಿಸಿದ್ದರು. ಈ ಬಗ್ಗೆ ಡಾ. ರಾಜ್ ಕುಟುಂಬದ ಸಂಬಂಧಿ, ನಟ, ಶಾಸಕ ಕುಮಾರ್ ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್ ರಾಜ್‌ಕುಮಾರ್ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಆದರೆ ಹೆಸರು ಬದಲಾಯಿಸಿದರು ಪುನೀತ್ ಬದುಕುಳಿಯಲಿಲ್ಲ.
Advertisement