ಕನ್ನಡ ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನಗಳ ತರಲು ಪುನೀತ್ ಆಸಕ್ತಿ ಹೊಂದಿದ್ದರು!

ನಟ ಪುನೀತ್ ರಾಜ್‌ಕುಮಾರ್ ಅವರು ಸಹೋದ್ಯೋಗಿಗಳು, ಸಮಾಜ ಮತ್ತು ಚಿತ್ರತಂಡದೊಂದಿಗೆ ಉತ್ತಮವಾದ ಸಂಬಂಧ ಹಾಗೂ ಬಾಂಧವ್ಯವನ್ನು ಹೊಂದಿದ್ದ ಅದ್ಭುತವಾಗಿ ಮತ್ತು ಉತ್ಸಾಹಭರಿತ ನಟರಾಗಿದ್ದರು. ಶಾಂತ ಮತ್ತು ಸಮತೋಲಿತ ವ್ಯಕ್ತಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ತರುವ ಆಸಕ್ತಿಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರು ಸಹೋದ್ಯೋಗಿಗಳು, ಸಮಾಜ ಮತ್ತು ಚಿತ್ರತಂಡದೊಂದಿಗೆ ಉತ್ತಮವಾದ ಸಂಬಂಧ ಹಾಗೂ ಬಾಂಧವ್ಯವನ್ನು ಹೊಂದಿದ್ದ ಅದ್ಭುತವಾಗಿ ಮತ್ತು ಉತ್ಸಾಹಭರಿತ ನಟರಾಗಿದ್ದರು. ಶಾಂತ ಮತ್ತು ಸಮತೋಲಿತ ವ್ಯಕ್ತಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ತರುವ ಆಸಕ್ತಿಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.

ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರು, ಕನ್ನಡ ಚಿತ್ರರಂಗದ ಶ್ರೇಷ್ಠ ನಟ ರಾಜಕುಮಾರ್ ಅವರ ಕಿರಿಯ ಮಗ ಪುನೀತ್ ರಾಜ್ ಕುಮಾರ್ ಆಗಿದ್ದಾರೆ. ವೃತ್ತಿಯಲ್ಲಿ ಒಂದು ಕುಟುಂಬವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಮತ್ತು ಯಶಸ್ವಿ ಗಳಿಸುವುದು ಅತ್ಯಂತ ಅಪರೂಪ. ಪುನೀತ್ ಮತ್ತು ಅವರ ಸಹೋದರ ಶಿವರಾಜಕುಮಾರ್ ಹಲವಾರು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಇದು ಅಪರೂಪ ಎಂದು ನಾನು ಹೇಳುತ್ತೇನೆ ಏಕೆಂದರೆ ಅಂತಹ ಗೌರವ ಮತ್ತು ಅನುಗ್ರಹದಿಂದ ಉದ್ಯಮದಲ್ಲಿ ಸ್ಪರ್ಧಿಸಿ ಉಳಿದುಕೊಂಡಿರುವ ಕುಟುಂಬಗಳು ಬಹಳ ಕಡಿಮೆ ಎಂದು ಹೇಳಿದ್ದಾರೆ.

ಪುನೀತ್ ಅವರು ವಿಶೇಷವಾಗಿ ಹೊಸ ತಂತ್ರಜ್ಞಾನಗಳಲ್ಲಿ ಆಸಕ್ತಿ ಹೊಂದಿದ್ದರು, ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ಗ್ಯಾಜೆಟ್‌ಗಳನ್ನು ಪರಿಚಯಿಸಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರನ್ನೂ ಪ್ರೋತ್ಸಾಹಿಸಿದ್ದಾರೆ. ತಮ್ಮ ತಂದೆಯ ಬಗ್ಗೆ ಬರೆಯಲಾಗಿದ್ದ ಪುಸ್ತಕವನ್ನು ಪ್ರಕಟಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರು, ಇದು ಸಾಕಷ್ಟು ವರ್ಷಗಳನ್ನೇ ತೆಗೆದುಕೊಂಡಿತು.

ಜನರು ತಾವು ಇಷ್ಟಪಡುವ ಕೆಲಸಗಳನ್ನು ಮಾಡಲು ಬದ್ಧರಾಗಿದ್ದು, ಅದು ಅವರನ್ನು ಸರಿಯಾದ ಮಾರ್ಗ ಹಿಡಿಯುವಂತೆ ಮಾಡಲಿದೆ ಎಂಬು ಪುನೀತ್ ನಂಬಿದ್ದರು. ಹೀಗಾಗಿ ಪುನೀತ್ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯಲಿದ್ದಾರೆ. ಚಿತ್ರರಂಗ ಅವರನ್ನು ಬಹಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com