ನಟಿ ಪಾಯಲ್ ರಾಧಾಕೃಷ್ಣ ಹಾಗೂ ಅರ್ಜುನ್ ಕಿಶೋರ್ ಚಂದ್ರ
ನಟಿ ಪಾಯಲ್ ರಾಧಾಕೃಷ್ಣ ಹಾಗೂ ಅರ್ಜುನ್ ಕಿಶೋರ್ ಚಂದ್ರ

'ಟ್ರಿಪಿಯಾನಾ'ದಲ್ಲಿ ಅರ್ಜುನ್ ಕಿಶೋರ್ ಚಂದ್ರ ನಟನೆ

ಲೈಫ್ 360 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನೆಕಾರ ಅರ್ಜುನ್ ಕಿಶೋರ್ ಚಂದ್ರ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ನಟನಾಗಿ, ಗೀತರಚನೆಕಾರರಾಗಿ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ.
Published on

ಲೈಫ್ 360 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನೆಕಾರ ಅರ್ಜುನ್ ಕಿಶೋರ್ ಚಂದ್ರ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ನಟನಾಗಿ, ಗೀತರಚನೆಕಾರರಾಗಿ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. 

ಟ್ರಿಪಿಯಾನಾ ಎಂಬ ಸೈಕೋ ಥ್ರಿಲ್ಲರ್ ಚಿತ್ರದಲ್ಲಿ ಅರ್ಜುನ್ ಕಿಶೋರ್ ಚಂದ್ರ ಅವರು ನಟಿಸಿದ್ದು. ಕೋವಿಡ್ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಚಿತ್ರೀಕರಿಸಿದ್ದ ಈ ಚಿತ್ರದ ವಿಡಿಯೋ ಸಾಂಗ್'ವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. 

ಅರ್ಜುನ್ ಕಿಶೋರ್ ಚಂದ್ರ ರಚನೆ, ನಿರ್ದೇಶನ ಹಾಗೂ ಅನಿಲ್ ಕುಮಾರ್ ಛಾಯಾಗ್ರಹಣವಿರುವ ಈ ವಿಡಿಯೋ ಸಾಂಗ್ ಗೆ ಎಸ್ಐಡಿ ಸಂಗೀತ ನೀಡಿ, ಸಂಕಲನ ಕಾರ್ಯವನ್ನು ಮಾಡಿದ್ದಾರೆ.

ಅನಿಶ್ಚಿತತೆಯ ಸಮಯದಲ್ಲಿ ಮಾನವ ಮನಸ್ಸಿನಲ್ಲಿ ಶುರುವಾಗುವ ಅಸಮತೋಲನವನ್ನು ವಿಡಿಯೋ ಸಾಂಗ್ ನಲ್ಲಿ ತೋರಿಸಲಾಗಿದೆ. 

ಅರ್ಜುನ್ ಕಿಶೋರ್ ಚಂದ್ರ, ಎಕೆಸಿ ಎಂದೇ ಪ್ರಸಿದ್ಧರಾಗಿದ್ದು, ವಿವಿಧ ಚಾನೆಲ್‌ಗಳಿಗೆ ಸಾಕ್ಷ್ಯಚಿತ್ರಗಳನ್ನು ಡಬ್ಬಿಂಗ್  ಕೂಡ ಮಾಡುತ್ತಿದ್ದಾರೆ, ಇತ್ತೀಚೆಗೆ ಚಿತ್ರವೊಂದರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರವಾಗಿರುವ 108 ಚಿತ್ರದಲ್ಲಿಯೂ ಅರ್ಜುನ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com